ಕರಾವಳಿ

ದೇವರ ದಾಸಿಮಯ್ಯ ಜಯಂತಿ

Views: 92

 

 

ಉಡುಪಿ:  ಆದ್ಯ ವಚನಕಾರ ನೇಕಾರ ದೇವರ ದಾಸಿಮಯ್ಯ ಜಯಂತಿ ಉತ್ಸವವನ್ನು ಉಡುಪಿ ಜಿಲ್ಲಾ ಆಡಳಿತ ವತಿಯಿಂದ ಜಿಲ್ಲಾ ಪಂಚಾಯತಿನ ಡಾ. ವಿ .ಎಸ್. ಆಚಾರ್ಯ ಸಭಾಭವನದಲ್ಲಿ ನೆರವೇರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಜಿಲ್ಲಾಧಿಕಾರಿಗಳಾದ  ಶ್ರೀ ಕೂರ್ಮರಾವ್ .ಎಂ, ಅವರು ಮಾತನಾಡಿ, ನಾಡಿನ ಎಲ್ಲಾ ನೇಕಾರರಿಗೆ ದೇವರ ದಾಸಿಮಯ್ಯ ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ವೀಣಾ, ಜಿಲ್ಲಾ ಪಂಚಾಯಿತಿನ ಶ್ರೀ ಯತೀಶ್, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾಧ್ಯಕ್ಷರಾದ ಶ್ರೀ ರಾಮದಾಸ್ ಶೆಟ್ಟಿಗಾರ್, ಶ್ರೀ ಲಕ್ಷ್ಮಣ ಶೆಟ್ಟಿಗಾರ್, ಶ್ರೀ ಮಾಧವ ಶೆಟ್ಟಿಗಾರ್ ಕೆರೆಕಾಡು, ಉಡುಪಿ ಜಿಲ್ಲಾ ನೇಕಾರ ಪ್ರತಿಷ್ಠಾದ ಅಧ್ಯಕ್ಷರಾದ ಶ್ರೀ ರತ್ನಾಕರ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಗಿರೀಶ ಶೆಟ್ಟಿಗಾರ್ ವಿಟ್ಲ ಇವರು ದೇವರ ದಾಸಿಮಯ್ಯನ ಕುರಿತು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ನೇಕಾರ ಫಲಾನುಭವಿಗಳಿಗೆ ಕೇಂದ್ರ ಸಕಾ೯ರದ ಮುದ್ರಾ ಯೋಜನೆಯಡಿಯಲ್ಲಿ ಆಥಿ೯ಕ ಸಹಾಯಧನವನ್ನು ವಿತರಿಸಲಾಯಿತು

Related Articles

Back to top button
error: Content is protected !!