ದೆಹಲಿಯಲ್ಲಿ ಸಿದ್ದರಾಮಯ್ಯ ಐದು ಬಿಗ್ ಡಿಮಾಂಡ್ ಏನಿದು? ಕಂಗಾಲಾದ ಹೈಕಮಾಂಡ್!
Views: 266
ಕನ್ನಡ ಕರಾವಳಿ ಸುದ್ದಿ: ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ. ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ದೆಹಲಿಗೆ ಪ್ರಯಾಣಿಸಿದ್ದಾರೆ. ಸರ್ಕಾರ, ಸಂಪುಟ ರಚನೆ ಸಂಬಂಧ ಉಭಯ ನಾಯಕರು ಶುಕ್ರವಾರ ಹೈಕಮಾಂಡ್ ಜೊತೆ ಚರ್ಚೆ ನಡೆಯುತ್ತಿದೆ.
ಹೈಕಮಾಂಡ್ ಜೊತೆಯಲ್ಲಿ ಸಿದ್ದರಾಮಯ್ಯ ಐದು ಪ್ರಮುಖ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ರಾಜ್ಯಕ್ಕೆ ಐದು ಡಿಸಿಎಂ ಬೇಕು. ಮಗನಿಗೆ ಪ್ರಬಲ ಖಾತೆಯಾದ ವೈದ್ಯಕೀಯ, ಜಲ ಸಂಪನ್ಮೂಲ, ಕೈಗಾರಿಕಾ ಖಾತೆಯನ್ನು ಪರಿಗಣಿಸಬೇಕು ಎಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಡಿಕೆಶಿ ಸಂಪುಟದಲ್ಲಿ ಸಿದ್ದು ಆಪ್ತರಿಗೆ ಹೆಚ್ಚಿನ ಚಾನ್ಸ್ ಸಿಗಬೇಕು. ರಾಜ್ಯಸಭೆ, ಎಂಎಲ್ಸಿ ಚುನಾವಣೆಯಲ್ಲಿ ನಾನು ಹೇಳಿದವರಿಗೂ ಅವಕಾಶ ಕೊಡಬೇಕು ಎಂದು ಬಿಗ್ ಆಫರ್ ಇಟ್ಟಿದ್ದಾರೆ
ಸಿದ್ದರಾಮಯ್ಯ, ಮೊದಲಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದರು.






