ಸಾಂಸ್ಕೃತಿಕ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಗಿಣಿರಾಮ’ ಧಾರಾವಾಹಿ ನಟಿ ಸುಷ್ಮಾ ಶೇಖರ್

Views: 95

ಕನ್ನಡ ಕರಾವಳಿ ಸುದ್ದಿ: ‘ಲಕುಮಿ’, ‘ಯಾರೇ ನೀ‌ ಮೋಹಿನಿ’, ‘ಗಿಣಿರಾಮ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸುಷ್ಮಾ ಶೇಖರ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಷ್ಮಾ ಶೇಖರ್‌ ಅವರು ಬಹುಕಾಲದ ಗೆಳೆಯನ ಜೊತೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

‘ವೆಂಕಟೇಶ್ವರ ಮಹಿಮೆ’ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸುಷ್ಮಾ ಶೇಖರ್ ಅವರು ‘ಕುಸುಮಾಂಜಲಿ’, ‘ಕನಕ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ನಂತರ ನಟನೆಯಿಂದ ದೂರ ಉಳಿದುಕೊಂಡು ಓದಿನ ಕಡೆಗೆ ಗಮನ ಹರಿಸಿದ್ದರು. ನಟಿ ಸುಷ್ಮಾ ಬಿಬಿಎ ಪದವೀಧರೆಯಾಗಿದ್ದಾರೆ.

 

Related Articles

Back to top button
error: Content is protected !!