ಸಾಂಸ್ಕೃತಿಕ

ದರ್ಶನ್-ಪವಿತ್ರಾ ಗೌಡ ಯಕ್ಷಗಾನ ಪ್ರಸಂಗಕ್ಕೂ ಎಂಟ್ರಿ: ವಿಡಿಯೋ ಸಖತ್ ಸದ್ದು!

Views: 261

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಯಕ್ಷಗಾನ ಪ್ರಸಂಗವೊಂದರಲ್ಲಿ ಪ್ರಜ್ವಲ್‌ ರೇವಣ್ಣ ಹೆಸರು  ಪ್ರಸ್ತಾಪ ಆಗಿತ್ತು. ಈ ವಿಡಿಯೋ ಭಾರೀ ಸದ್ದು ಮಾಡಿತ್ತು ಇದೀಗ ದರ್ಶನ್‌, ಪವಿತ್ರಾ ಗೌಡ ವಿಚಾರ ಯಕ್ಷಗಾನಕ್ಕೂ ಎಂಟ್ರಿ ಕೊಟ್ಟಿದ್ದು, ಈ ವಿಡಿಯೋ ಸಖತ್‌ ಸದ್ದು ಮಾಡುತ್ತಿವೆ.

ಈ ಪ್ರಕರಣ ಬರೀ ರಾಜ್ಯ ಅಲ್ಲದೆ, ಇಡೀ ದೇಶಾದ್ಯಂತ ಹರಡಿಬಿಟ್ಟಿದೆ. ಸುದ್ದಿ ಮಾಧ್ಯಮ, ಟ್ರೋಲ್‌ ಪೇಜ್‌, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿಯದ್ದೇ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲದೆ ಇದೀಗ ನಟ ದರ್ಶನ್‌ ಮತ್ತು ಪವಿತ್ರಾ ವಿಚಾರ ಯಕ್ಷಗಾನ ಪ್ರಸಂಗಕ್ಕೂ ಎಂಟ್ರಿ ಕೊಟ್ಟಿದ್ದು, ಈ ವಿಡಿಯೋವೊಂದು ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಈ ವಿಡಿಯೋದಲ್ಲೆ ಏನಿದೆ?

ಇದೀಗ ತುಳು ಯಕ್ಷಗಾನ ಬಯಲಾಟವೊಂದರಲ್ಲಿ ರಂಗಸ್ಥಳದಲ್ಲಿ ಹಾಸ್ಯಕಲಾವಿದರ ನಡುವೆ ನಡೆದ ಸಂಭಾಷಣೆಯಲ್ಲಿ ದರ್ಶನ್‌-ಪವಿತ್ರಾ ಹೆಸರು ಪ್ರಸ್ತಾಪ ಆಗಿದ್ದು, ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇನ್ನು ಈ ವಿಡಿಯೋವನ್ನು ಸ್ವಸ್ತಿಕ್‌ ಕನ್ಯಾಡಿ (@swasthik_kanyadi) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಯಕ್ಷಗಾನದಲ್ಲಿ ದರ್ಶನ್-ಪವಿತ್ರ ಮ್ಯಾಟರ್‌” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇನ್ನು ಈ ಯಕ್ಷಗಾನ ಬಯಲಾಟದ ವಿಡಿಯೋದಲ್ಲಿ ಹಾಸ್ಯಕಲಾವಿದರು ದರ್ಶನ್‌ ಮತ್ತು ಪವಿತ್ರ ಹೆಸರನ್ನು ಹೇಳಿದ ದೃಶ್ಯವನ್ನು ಕಾಣಬಹುದು. ಅದರಲ್ಲಿ ಒಬ್ಬ ಕಲಾವಿದ  ದರ್ಶನ್‌ ಬೇಕೇ ಬೇಕು ಎಂದು ಹೇಳುತ್ತಾರೆ. ಆ ವೇಳೆ ದರ್ಶನ್‌ ಬೇಡ, ದರ್ಶನದ ವ್ಯವಸ್ಥೆ ಮಾಡಿದರೆ, ನಾವು ಸಹ ಒಳಗೆ ಇರಬೇಕಾಗುತ್ತದೆ. ದರ್ಶನವೂ ಬೇಡ.. ಪವಿತ್ರವೂ ಬೇಡ ಅಂತಾ ಹೇಳುವ ಹಾಸ್ಯ ದೃಶ್ಯವನ್ನು ಇಲ್ಲಿ ಕಾಣಬಹುದಾಗಿದೆ.

Related Articles

Back to top button
error: Content is protected !!