ಸಾಂಸ್ಕೃತಿಕ

ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವಿನ ಭುಗಿಲೆದ್ದ ಶೀತಲ ಸಮರ!

Views: 203

ಕನ್ನಡ ಕರಾವಳಿ ಸುದ್ದಿ: ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವಿನ ಶೀತಲ ಸಮರ ಮತ್ತೊಮ್ಮೆ ಭುಗಿಲೆದ್ದಿದೆ. ಒಂದೆಡೆ ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ದರ್ಶನ ಅವರ ಜೊತೆಗೆ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋವನ್ನು ಹಾಕಿ ದೇವರಿದ್ದಾನೆ ಎಂದು ಬರೆದುಕೊಂಡರೆ, ಇದರ ಬೆನ್ನಲ್ಲೇ ಇದೀಗ ಪವಿತ್ರಾ ಗೌಡ ಕೂಡ ಪೋಸ್ಟ್‌ ಒಂದನ್ನು ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ ಪವಿತ್ರ, ಮನುಷ್ಯರು ಬಣ್ಣ‌ ಬದಲಾಯಿಸಿದರೇನು? ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ ಎಂದು ಬರೆದಿದ್ದಾರೆ.

ಪವಿತ್ರ ಗೌಡ ಹಾಕಿದ ಪೋಸ್ಟ್‌ ಇದೀಗ ಚರ್ಚೆಗೆ ಕಾರಣವಾಗಿದೆ. ಬೇಕಂತಲೇ ವಿಜಯಲಕ್ಷ್ಮಿ ಅವರಿಗೆ ಟಾಂಗ್‌ ಕೊಡಲು ಪವಿತ್ರ ಈ ರೀತಿಯ ಪೋಸ್ಟ್‌ ಹಾಕಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಗಿರುವ ಪವಿತ್ರಾ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಮಂತ್ರಾಲಯಕ್ಕೂ ತೆರಳಿದ್ದರು. ವಿಜಯ ಲಕ್ಷ್ಮೀ ಕೂಡ ಗಂಡನ ಬಿಡುಗಡೆಗಾಗಿ ಹಲವು ಹರಕೆ ಹೊತ್ತಿದ್ದರು.

ಮೊನ್ನೆಯಷ್ಟೇ ಕಾಮಾಕ್ಯ ದೇವಾಲಯಕ್ಕೆ ದರ್ಶನ್‌ ಕುಟುಂಬ ಸಮೇತ ಭೇಟಿ ನೀಡಿದ್ದರು. ಆ ಫೋಟೋ ಶೇರ್‌ ಮಾಡಿದ ದರ್ಶನ್‌ ಪತ್ನಿ ಹೆಚ್ಚು ಜನರು ನಿಮ್ಮನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತಾನೆ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ’’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ದರ್ಶನ್‌ರನ್ನ ತುಳಿಯಲು ಯತ್ನಿಸುತ್ತಿರುವವರಿಗೆ ಮಾರ್ಮಿಕವಾಗಿ ಉತ್ತರ ನೀಡಿದ್ದರು.

ವಿಜಯಲಕ್ಷ್ಮಿ ಪೋಸ್ಟ್‌ ಬೆನ್ನಲ್ಲೇ ಇತ್ತ ಪವಿತ್ರಾ ಗೌಡ ಕೂಡ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ರಾಯರನ್ನು ನೆನೆದು ಪೋಸ್ಟ್‌ ಒಂದನ್ನು ಮಾಡಿರುವ ಪವಿತ್ರಾ ಗೌಡ, ಮನುಷ್ಯರು ಬಣ್ಣ‌ ಬದಲಾಯಿಸಿದರೇನು? ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ. ನನ್ನ ಮೌನ ನನ್ನ ಬಲಹೀನತೆಯಲ್ಲ, ಇದು ದೇವರ ನ್ಯಾಯದ ಮೇಲೆ ಇರುವ ನಂಬಿಕೆ ಎಂದು ಹಾಕಿದ್ದಾರೆ. ಇದು ವಿಜಯ ಲಕ್ಷ್ಮಿ ಅವರಿಗಂತಲೇ ಹಾಕಿದ್ದಾರಾ.. ಇಲ್ಲ ರೆಡ್‌ ಕಾರ್ಪೆಟ್‌ ಸ್ಟುಡಿಯೋವನ್ನು ಹೊಸ ರೀತಿಯಲ್ಲಿ ಮುನ್ನಡೆಸುತ್ತಿರುವುದಕ್ಕೆ ಇಂತಹ ಪೋಸ್ಟ್‌ಗಳು ಬಂದಿವೆಯಾ ಎಂದು ಚರ್ಚೆ ನಡೆಯುತ್ತಿದೆ

 

Related Articles

Back to top button
error: Content is protected !!