ಸಾಂಸ್ಕೃತಿಕ

ದರ್ಶನ್ ಅರೆಸ್ಟ್ ಆದಮೇಲೆ ಮೊದಲ ಬಾರಿಗೆ ಠಾಣೆಗೆ ಬಂದ ಪತ್ನಿ ವಿಜಯಲಕ್ಷ್ಮೀ! 

Views: 270

ಬೆಂಗಳೂರು :ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿ ಇಂದಿಗೆ 9 ದಿನ. ಅರೆಸ್ಟ್ ಆದ ನಂತರದಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪೊಲೀಸ್ ಠಾಣೆಗೆ ಬಂದಿರಲಿಲ್ಲ. ಆದರೀಗ ಇದ್ದಕ್ಕಿದ್ದಂತೆಯೇ ಪೊಲೀಸ್ ಠಾಣೆಯಲ್ಲಿ ವಿಜಯಲಕ್ಷ್ಮೀ ಪ್ರತ್ಯಕ್ಷರಾದರು.

ವಿಜಯಲಕ್ಷ್ಮೀಯವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಇದೇ ಮೊದಲ ಬಾರಿಗೆ ಠಾಣೆಗೆ ಆಗಮಿಸಿದ್ದಾರೆ. ಆದರೆ ಯಾವ ಉದ್ದೇಶಕ್ಕಾಗಿ ಬಂದಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಸದ್ಯ ಠಾಣೆಯ ಒಳಗೆ ವಿಜಯಲಕ್ಷ್ಮೀ ಹೋಗಿದ್ದಾರೆ

ವಿಜಯಲಕ್ಷ್ಮೀಯವರು ಕಾರಿನಲ್ಲಿ ಠಾಣೆಗೆ ಬಂದಿದ್ದಾರೆ. ಆದರೆ ಕಾರಿನಲ್ಲಿ ಯಾರ್ಯಾರು ಬಂದಿದ್ದಾರೆ ಎನ್ನುವ ಬಗ್ಗೆ ಸ್ವಷ್ಟ ಮಾಹಿತಿ ಬರಬೇಕಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿ ಇಂದಿಗೆ 9 ದಿನ. ಅರೆಸ್ಟ್ ಆದ ನಂತರದಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀಯಾಗಲಿ, ಸ್ನೇಹಿತರು, ಕುಟುಂಬಸ್ಥರು, ತಾಯಿ ಮೀನಾ, ತಮ್ಮ ದಿನಕರ್ ತೂಗುದೀಪ್ ಪೊಲೀಸ್ ಠಾಣೆಯತ್ತ ಬಂದಿರಲಿಲ್ಲ. ಆದರೀಗ ಇದ್ದಕ್ಕಿದ್ದಂತೆಯೇ ಪೊಲೀಸ್ ಠಾಣೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪ್ರತ್ಯಕ್ಷವಾಗಿದ್ದಾರೆ.

Related Articles

Back to top button
error: Content is protected !!