ದರ್ಶನ್ ಅಂಡ್ ಗ್ಯಾಂಗ್‌ಗೆ ಇಂದು ನಿರ್ಣಾಯಕ ದಿನ! ಯಾವುದೇ ಕಾರಣಕ್ಕೂ ಬೇಲ್ ನೀಡದಂತೆ ಪೊಲೀಸರ ಪಟ್ಟು

Views: 116
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆಯುವುದೇ ನಟ ದರ್ಶನ್‌ಗೆ ದೊಡ್ಡ ಸವಾಲಾಗಿದೆ. ಈ ಹತ್ಯೆ ಪ್ರಕರಣದಲ್ಲಿ ಸುಲಭದಲ್ಲಿ ಬೇಲ್ ಸಿಗದಂತೆ ಪೊಲೀಸರು ಕಾನೂನಿನ ಬಿಗಿ ಪಟ್ಟು ಹೆಣೆದಿದ್ದಾರೆ. ರಿಮಾಂಡ್ ಅರ್ಜಿಯಲ್ಲೇ ಬೇಲ್ ನೀಡದಂತೆ ಪೊಲೀಸರು ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
ಕೊಲೆ ಆರೋಪಿಗಳಿಗೆ ಜಾಮೀನು ನೀಡದಂತೆ ಮನವಿ ಯಾಕೆ?
ಆರೋಪಿಗಳಿಗೆ ಕಾನೂನಿನ ಮೇಲೆ ಕಿಂಚಿತ್ತೂ ಗೌರವ ಇಲ್ಲ. ಪವಿತ್ರಾ ಗೌಡ ಸೇರಿ ಎಲ್ಲರೂ ಕೃತ್ಯದಲ್ಲಿ ಒಳಸಂಚು ಮಾಡಿದ್ದಾರೆ. ಕೃತ್ಯದಲ್ಲಿ ದರ್ಶನ್ ಅಭಿಮಾನಿ ಬಳಗ ಬಳಕೆ ಮಾಡಿದ್ದಾರೆ. ಸೆಲೆಬ್ರಿಟಿಯಾಗಿ ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ. ದರ್ಶನ್, ಹಣ ಬಲ ಮತ್ತು ಪ್ರಭಾವಿಗಳ ಬಲವನ್ನು ಹೊಂದಿದ್ದಾರೆ. ಎಲ್ಲರೂ ಸಮಾನ ಉದ್ದೇಶದಿಂದ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಭೌತಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷಿ ನಾಶಕ್ಕೆ ಹಣ ಬಲ ಮತ್ತುಆಮಿಷವನ್ನು ಬಳಕೆ ಮಾಡಿದ್ದಾರೆ. ದರ್ಶನ್ ಸೇರಿ 4 ಮಂದಿಗೆ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇದೆ. ಸಾಕ್ಷಿ ನಾಶಕ್ಕೆ ಯತ್ನಿಸಿರೋದಕ್ಕೂ ಸಾಕಷ್ಟು ಸಾಕ್ಷಿಗಳು ಇವೆ.ದರ್ಶನ್ ಅಭಿಮಾನಿಗಳನ್ನು ಬಳಸಿಕೊಂಡು ತನಿಖೆಗೆ ಅಡ್ಡಿ. ಕೃತ್ಯದಲ್ಲಿ ದರ್ಶನ್ ಮತ್ತು ಇತರರು ನೇರ ಭಾಗಿಯಾಗಿದ್ದಕ್ಕೆ ಸಾಕ್ಷಿ ಲಭ್ಯ. ಆರೋಪಿ ಪ್ರಭಾವ ಬಳಸಿ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ.ಹಣ ಬಲ, ಪ್ರಭಾವಿಗಳ ಬಲ ಬಳಸಿ ಸಾಕ್ಷಿಗಳಿಗೆ ಬೆದರಿಕೆ ಸಾಧ್ಯತೆ. ಕೃತ್ಯದಲ್ಲಿ ಜೀವಾವಧಿ ಶಿಕ್ಷೆಯ ಅಪರಾಧದ ಭಾಗವಿದೆ
ಈ ಎಲ್ಲಾ ಕಾರಣವನ್ನು ಮುಂದಿಟ್ಟುಕೊಂಡು ಪೊಲೀಸರು ದರ್ಶನ್ ಮತ್ತು ಗ್ಯಾಂಗ್ಗೆ ಬೇಲ್ ಸಿಗದಂತೆ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಕಾನೂನಿನ ಕುಣಿಕೆಯಿಂದ ರೇಣುಕಾ ಹತ್ಯೆ ಆರೋಪಿಗಳು ತಪ್ಪಿಸಿಕೊಳ್ಳಬಾರದು ಅಂತ ಪೊಲೀಸರು ಪಟ್ಟು ಹಿಡಿದಿದ್ದು, ಅಂತಿಮವಾಗಿ ನ್ಯಾಯವೇ ಮೇಲುಗೈ ಸಾಧಿಸಬೇಕಿದೆ.ಇಂದು ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಗ್ಯಾಂಗ್ ಅನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದ್ದು, ನ್ಯಾಯಾಧೀಶರ ನಿರ್ಧಾರ ಕುತೂಹಲ ಕೆರಳಿಸಿದೆ.






