ಇತರೆ

ದನ ಮೇಯಿಸುತ್ತಿದ್ದವನ ಮೇಲೆ ಹುಲಿ ದಾಳಿಗೆ ಮತ್ತೋರ್ವ ರೈತ ಬಲಿ

Views: 54

ಕನ್ನಡ ಕರಾವಳಿ ಸುದ್ದಿ ಸುದ್ದಿ: ಸರಗೂರು ತಾಲೂಕಿನಲ್ಲಿ ಹುಲಿ ದಾಳಿಗೆ ರೈತರೊಬ್ಬರು ಬಲಿಯಾಗಿದ್ದ ಘಟನೆ ಐದು ದಿನಗಳ ಹಿಂದಷ್ಟೇ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೋರ್ವ ರೈತನನ್ನು ಹುಲಿ ಬಲಿ ಪಡೆದಿದೆ.

ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುರ್ಣಿಗ್ರಾಮನಲ್ಲಿ ಹುಲಿ ದಾಳಿಗೆ ಇಂದು ಮತ್ತೋರ್ವ ರೈತ ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ದನ ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿದ್ದು, ರೈತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಿಂಗಯ್ಯ ಮೃತ ರೈತ

ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ಐದು ದಿನಗಳ ಹಿಂದೆ ರೈತ ರಾಜಶೇಖರ್ ಹುಲಿದಾಳಿಗೆ ಬಲಿಯಾಗಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ.

Related Articles

Back to top button
error: Content is protected !!