ದಕ್ಷಿಣ ಆಫ್ರಿಕಾ: 5 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ, 63 ಮಂದಿ ದುರ್ಮರಣ

Views: 0
ಜೋಹಾನ್ಸ್‌ಬರ್ಗ್: ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಂಭವಿಸಿದ ಕನಿಷ್ಠ 63 ಮಂದಿ ಮೃತಪಟ್ಟಿದ್ದು 43 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದ ಮಧ್ಯ ಜೋಹಾನ್ಸ್‌ಬರ್ಗ್‌ನಲ್ಲಿ ಸಂಭವಿಸಿದೆ.
ಘಟನೆಯ ಕುರಿತು ತುರ್ತು ನಿರ್ವಹಣಾ ಸೇವೆಗಳ ವಕ್ತಾರ ರಾಬರ್ಟ್ ಮುಲಾಡ್ಜಿ ಟ್ವೀಟ್ ಮಾಡಿದ್ದು, ಅಗ್ನಿ ಅವಘಡದಲ್ಲಿ ಸುಮಾರು 63 ಮಂದಿ ಮೃತಪಟ್ಟಿದ್ದು, ಜೊತೆಗೆ 43ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಗುರುವಾರ ಬೆಳಿಗ್ಗೆ ಘಟನೆ ನಡೆದಿದ್ದು ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಕಿಯನ್ನು ಬಹುಮಟ್ಟಿಗೆ ನಂದಿಸಲಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ಮೃತಪಟ್ಟಿರುವ 63 ಮಂದಿಯಲ್ಲಿ ಒಂದು ಮಗುವಿದೆ. ಕಟ್ಟಡಲ್ಲಿ ಸುಮಾರು 200 ಮಂದಿ ಇದ್ದರು ಎಂಬ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ದಟ್ಟ ಹೊಗೆ ಪ್ರದೇಶ ಸುತ್ತ ಆವರಿಸಿಕೊಂಡಿದೆ