ಕೃಷಿ

ತೆಂಗಿನಕಾಯಿ ಬೆಲೆ ಕಿಲೋಗೆ ₹70ಕ್ಕೆ ಏರಿಕೆ, ಬೆಳೆಗಾರರು ಸಂತಸ..ಗ್ರಾಹಕರು ಕಂಗಾಲು!

Views: 141

ಕನ್ನಡ ಕರಾವಳಿ ಸುದ್ದಿ: ತೆಂಗಿನಕಾಯಿ ಬೆಲೆ ಇದೀಗ ಮಾಟುಕಟ್ಟೆಯಲ್ಲಿ ದಾಖಲೆಯತ್ತ ಮುನ್ನುಗ್ಗುತ್ತಿದೆ. ಮದುವೆ ಸೀಜನ್ ಮೊದಲೇ ತೆಂಗಿನಕಾಯಿ ಹಾಗೂ ಕೊಬ್ಬರಿಗೆ ಬಂಪರ್ ಬೆಲೆ ಬಂದಿದ್ದು, ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ನಿತ್ಯದ ಅಡುಗೆಗೆ ಹಾಗೂ ಬೇಕರಿಗೆ ಅವಶ್ಯವಾಗಿರುವ ತೆಂಗಿನಕಾಯಿಯ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರು ಖರೀದಿ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಒಣ ಕೊಬ್ಬರಿಗಿಂತ ಹಸಿ ತೆಂಗಿನಕಾಯಿಗೆ ಮತ್ತು ಕೊಬ್ಬರಿ ಎಣ್ಣೆ ಮತ್ತು ಕೊಬ್ಬರಿ ಪೌಡರ್‌ಗೆ ಬೆಲೆ ಹೆಚ್ಚಾಗಿದೆ. ಕೊಬ್ಬರಿ ಎಣ್ಣೆಲೀ. ಗೆ 280-320 ರು. ಆಗಿದೆ. ಕೊಬ್ಬರಿ ಪೌಡರ್ 230 ಆಗಿದೆ.

ರೈತರು ಈಗ ಹೆಚ್ಚಾಗಿ ಕೆ.ಜಿ ಲೆಕ್ಕದಲ್ಲಿ ಚಿಕ್ಕದು ದೊಡ್ಡ ತೆಂಗಿನಕಾಯಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಕ್ವಿಂಟಲ್‌ಗೆ ಸಗಟು ಬೆಲೆ 65,000-70,000 ರು. ಗೆ ಮಾರಾಟವಾಗುತ್ತಿದೆ. ಇದರಲ್ಲಿ ವಿಂಗಡಿಸಿದ ದಪ್ಪ ಗಾತ್ರದ ಒಂದು ಕಾಯಿಗೆ 65 ರು. ಮಧ್ಯಮ ದಪ್ಪ 45 ರು. ಹಾಗೂ ಸಣ್ಣ 30 ರು. ಮಾರಾಟವಾಗುತ್ತಿದೆ. ಇದು ಸಗಟು ಬೆಲೆಯಾಗಿದ್ದು, ಚಿಲ್ಲರೆ ಅಂಗಡಿಗಳಲ್ಲಿ ದಪ್ಪ 70 ರು. ಮಧ್ಯಮ 50 ರು. ಮತ್ತು ಸಣ್ಣ ತೆಂಗಿನಕಾಯಿಗಳು ರು. 35ಕ್ಕೆ ಮಾರಾಟದಾಗುತ್ತಿದೆ. ಒಟ್ಟಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ತೆಂಗಿನಕಾಯಿ ದರ ಮೂರು ಪಟ್ಟು ಏರಿಕೆಯಾಗಿದೆ.

ಎಳನೀರು ಒಣ ಕೊಬ್ಬರಿ, ಮುಂಬಯಿ, ಹೊಸದಿಲ್ಲಿ ಗೋವಾ ಸೇರಿದಂತೆ ದೇಶದ ನಾನಾ ಭಾಗಗಳಿಗೆ ರೈತರ ತೋಟಗಳಿಂದಲೇ ಖರೀದಿಸಿ ರವಾನಿಸುತ್ತಾರೆ. ಈ ಹಿನ್ನೆಲೆಯಲ್ಲಿ ದರಗಳಲ್ಲಿ ಬಲಿತ ಕಾಯಿಗಳೇ ಇಲ್ಲವಾಗಿವೆ. ಹೀಗಾಗಿ ಪೂರೈಕೆ ಕಡಿಮೆಯಾಗಿರುವುದರಿಂದ ಸಹಜವಾಗಿ ತೆಂಗಿನಕಾಯಿ ದರ ಏರಿಕೆಯಾಗಿದೆ.

ದೂರದ ದಿಲ್ಲಿ, ಗೋವಾ, ಮುಂಬೈ ಮತ್ತು ಪೂನಾ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಕರ್ನಾಟಕದ ಎಳನೀರಿಗೆ ಭಾರಿ ಬೇಡಿಕೆ ಇದೆ. ಅಂದಾಜು ಪ್ರತಿದಿನ 80,000ಕ್ಕಿಂತ ಹೆಚ್ಚು ಎಳನೀರಿನ ಕಾಯಿಗಳನ್ನು ರಫ್ತು ಮಾಡುತ್ತಾರೆ. ರೈತರಿಂದ ಸಾವಿರ ಎಳನೀರನ್ನು ರು. 30,000-35,000 ರು , ಹಿನ್ನೆಲೆಯಲ್ಲಿ ಮರಗಳಲ್ಲಿ ಬಲಿತ ಕಾಯಿಗಳೇ ಸಿಗುತ್ತಿಲ್ಲ. ಹೀಗಾಗಿ ಪೂರೈಕೆ ಕಡಿಮೆಯಾಗಿರುವುದರಿಂದ ಸಹಜವಾಗಿ ತೆಂಗಿನಕಾಯಿ ದರ ಏರಿಕೆಯಾಗಿದೆ.

ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಬಿಹಾರ, ಉತ್ತರಾಂಚಲ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಅರಸೀಕೆರೆಯ ಮಾರುಕಟ್ಟೆಯಿಂದ ರವಾನೆಯಾಗುತ್ತದೆ. ಅಲ್ಲಿ ಉಂಡೆ ಕೊಬ್ಬರಿಗೆ ಬೇಡಿಕೆ ಇದೆ. ಹೀಗಾಗಿ ತೆಂಗಿನಕಾಯಿ ಬದಲಿಗೆ ಒಣ ಕೊಬ್ಬರಿಗೆ ದಾಸ್ತಾನು ಮಾಡುತ್ತಾರೆ, ಇದು ಕೂಡಾ ತೆಂಗಿನಕಾಯಿ ಕೊರತೆಗೆ ಕಾರಣವಾಗಿದೆ

ಬೆಲೆ ಹೆಚ್ಚಳಕ್ಕೆ ಕಾರಣ

ಈ ಹಿಂದೆ ಇದ್ದ ತೆಂಗಿನ ತೋಟಗಳಲ್ಲಿ ಶೇ 30ರಿಂದ 40ರಷ್ಟು ತೆಂಗಿನ ಮರಗಳು ಹಾಳಾಗಿವೆ. ಶೇ.20ರಿಂದ 30 ಮರಗಳು ಸಂಪೂರ್ಣ ನಾಶವಾಗಿವೆ. ಈ ಹಿನ್ನೆಲೆಯಲ್ಲಿ ಈ ವರ್ಷ ಶೇ.40 ರಷ್ಟು ಇಳುವರಿ ಕೊರತೆಯಾಗಿದೆ. ಈ ಸಲ ಹೆಚ್ಚು ಮಳೆ ಬಂದಿದ್ದರೂ ಇಳುವರಿ ಕಡಿಮೆಯಾಗಿದೆ, ಮಳೆ ಕಡಿಮೆಯಾದರೂ ಇಳುವರಿ ಕಡಿಮೆಯಾಗುತ್ತದೆ. 2016ದಲ್ಲಿ ಬರ ಕಾಣಿಸಿಕೊಂಡ ಬಳಿಕ ತೆಂಗಿನಕಾಯಿ ಇಳುವರಿಯೇ ಕಡಿಮೆಯಾಗುತ್ತಾ ಬಂದಿದೆ. ಒಂದು ತೆಂಗಿನಕಾಯಿ ಗಿಡದಲ್ಲಿ ಕನಿಷ್ಠ 50-60 ಕಾಯಿಗಳು ಬರಬೇಕು. ಆದರೆ ಈಗ 10-15 ಕಾಯಿ ಬಂದರೆ ಹೆಚ್ಚು ಎಂದು ತೆಂಗಿನಕಾಯಿ ಬೆಳೆಗಾರರು ಹೇಳುತ್ತಾರೆ. ನುಸಿಪೀಡೆಯಿಂದ ತೆಂಗಿನಕಾಯಿಯ ಗುಣಮಟ್ಟ ಕಡಿಮೆಯಾಗಿ ಉಂಡೆ ಕೊಬ್ಬರಿ ಕಾಯಿಯೂ ಕುಂಠಿತವಾಗಿದೆ. ತೆಂಗಿನ ಕಾಯಿ ಇಳುವರಿ ಕುಂಠಿತವಾಗಲು ಮತ್ತೊಂದು ಕಾರಣವೆಂದರೆ ತೆಂಗಿನ ಮರಗಳಿಗೆ ಪೋಷಕಾಂಶದ ಕೊರತೆ. ತೆಂಗಿನಮರಗಳಿಗೆ ಸರಿಯಾದ ಪೋಷಕಾಂಶದ ಅಗತ್ಯವಿದೆ. ನೀರು ಕೂಡ ಹೆಚ್ಚಾಗಿ ಬೇಕಾಗುತ್ತದೆ.

Related Articles

Back to top button