ಸಾಮಾಜಿಕ

ತರಗತಿಯಲ್ಲೇ ವಿದ್ಯಾರ್ಥಿಯನ್ನು ವರಿಸಿದ ಪ್ರಾಧ್ಯಾಪಕಿ! 

Views: 459

ಕನ್ನಡ ಕರಾವಳಿ ಸುದ್ದಿ: ತರಗತಿಯಲ್ಲಿ ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಮದುವೆ ಆಗಿದ್ದಾರೆ ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಂದಿದೆ.

ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿ ತರಗತಿಯೊಳಗೆ ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಳ್ಳುತ್ತಿರುವುದು, ಹಣೆಗೆ ಸಿಂಧೂರು ಇಡುತ್ತಿರುವುದು ಸೇರಿ ಹಿಂದೂ-ಬಂಗಾಳಿ ಸಂಪ್ರದಾಯದಂತೆ ಮದುವೆ ವಿಧಿಗಳನ್ನು ನಡೆಸುತ್ತಿರುವುದು’ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬಂದಿದೆ. ಈ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ಮೌಲಾನಾ ಅಬುಲ್ ಕಲಾಂ ಅಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ತರಗತಿಯಲ್ಲಿ ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿ ಮದುವೆ ಆಗಿದೆ ಎನ್ನಲಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಎಚ್ಚೆತ್ತ ವಿಶ್ವವಿದ್ಯಾಲಯ, ಮಧ್ಯಪ್ರವೇಶಿಸಿ ಈ ವಿಷಯವನ್ನು ತನಿಖೆ ಮಾಡಲು ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಪ್ರಾಧ್ಯಾಪಕಿಗೆ ಕಡ್ಡಾಯ ರಜೆ ಸೂಚಿಸಿದೆ. ಹಾಗೂ ಕೆಲ ಸಮಯ ತರಗತಿಗೆ ಹಾಜರಾಗದಂತೆ ವಿದ್ಯಾರ್ಥಿಗೆ ಆದೇಶಿಸಿದೆ.

 

Related Articles

Back to top button