ತಮಿಳು ನಟನಿಂದ ಲೈಂಗಿಕ ದೌರ್ಜನ್ಯ ಎಂಬ ಪೋಸ್ಟ್: ಒಳ್ಳೆಯ ಮನುಷ್ಯರಾಗಿ ಎಂದು ನಿತ್ಯಾ ಮೆನನ್

Views: 1
ನಿತ್ಯಾ ಮೆನನ್ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹಾಗೂ ಮಾಲಿವುಡ್ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ.
ಇದೀಗ ತಮ್ಮ ವಿರುದ್ಧ ಹರಿದಾಡುತ್ತಿರುವ ಸುಳ್ಳು ಸುದ್ದಿಯೊಂದರ ವಿರುದ್ಧ ನಿತ್ಯಾ ಮೆನನ್ ಗರಂ ಆಗಿದ್ದು, ಸ್ಪಷ್ಟನೆ ನೀಡಿದ್ದಾರೆ.
ತೆಲುಗು ಇಂಡಸ್ಟ್ರಿಯಿಂದ ನಾನು ಯಾವುದೇ ಸಮಸ್ಯೆಯನ್ನು ಎಂದಿಗೂ ಎದುರಿಸಿಲ್ಲ. ಆದರೆ, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದೇನೆ. ಸಿನಿಮಾವೊಂದರ ಶೂಟಿಂಗ್ ವೇಳೆ ನಟನೊಬ್ಬ ಲೈಂಗಿಕ ಕಿರುಕುಳ ನೀಡಿದರು ಎಂದು ನಿತ್ಯಾ ಮೆನನ್ ಹೇಳಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಇದೀಗ ಶಾಕ್ ಆಗಿದೆ. ಕಿರುಕುಳ ನೀಡಿದ ಆ ಹೀರೋ ಯಾರೆಂಬ ಚಿಂತೆಯಲ್ಲಿದ್ದಾರೆ ಎಂದು ಬಜ್ ಬಾಸ್ಕೆಟ್ ಎಂಬ ಎಕ್ಸ್ ಖಾತೆಯಲ್ಲಿ ನಿತ್ಯಾ ಮೆನನ್ ಫೋಟೋದೊಂದಿಗೆ ಪೋಸ್ಟ್ ಮಾಡಲಾಗಿದೆ
ಇದೀಗ ಈ ಪೋಸ್ಟ್ನ ಸ್ಕ್ರೀನ್ ಶಾಟ್ ಅನ್ನು ನಿತ್ಯಾ ಮೆನನ್ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡು ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಈ ಭೂಮಿಯ ಮೇಲೆ ಅಲ್ಪಾವಧಿಗೆ ಮಾತ್ರ ಇರುತ್ತೇವೆ. ನಾವು ಒಬ್ಬರಿಗೊಬ್ಬರು ಎಷ್ಟು ತಪ್ಪು ಮಾಡುತ್ತೇವೆ ಎಂದು ನನಗೆ ಯಾವಾಗಲೂ ಆಶ್ಚರ್ಯವಾಗುತ್ತದೆ. ನಾನಿಂದು ಇದರ ಬಗ್ಗೆ ಹೇಳಲೇಬೇಕಿದೆ. ಏಕೆಂದರೆ, ಹೊಣೆಗಾರಿಕೆ ಮಾತ್ರ ಕೆಟ್ಟ ನಡವಳಿಕೆಯನ್ನು ನಿಲ್ಲಿಸುತ್ತದೆ. ಮೊದಲು ಒಳ್ಳೆಯ ಮನುಷ್ಯರಾಗಿ ಎನ್ನುವ ಮೂಲಕ ಸುಳ್ಳು ಸುದ್ದಿ ಹರಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.






