ಸಾಂಸ್ಕೃತಿಕ
ಡಾ| ನಾ. ಸೋಮೇಶ್ವರ ಅವರಿಗೆ “ಕಾರಂತ ಪ್ರಶಸ್ತಿ’’ ಗೆ ಆಯ್ಕೆ

Views: 13
ಚಂದನ ವಾಹಿನಿಯಲ್ಲಿ 4 ಸಾವಿರ ಕಂತುಗಳನ್ನು ಪೂರೈಸಿರುವ “ಥಟ್ಟಂತ ಹೇಳಿ’ ಕಾರ್ಯಕ್ರಮದ ಮೂಲಕ ಜನಮಾನಸಕ್ಕೆ ಚಿರಪರಿಚಿತರಾಗಿರುವ ಡಾ| ನಾ. ಸೋಮೇಶ್ವರ ಅವರನ್ನು “ಕಾರಂತ ಪ್ರಶಸ್ತಿ – 2023’ಕ್ಕೆ ಆಯ್ಕೆ ಮಾಡಲಾಗಿದೆ.
ಅವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡು 30ಕ್ಕೂ ಹೆಚ್ಚು ವಿವಿಧ ವಿಷಯಾಧರಿತ ಪುಸ್ತಕಗಳನ್ನು ಬರೆದಿದ್ದಾರೆ. ಅಕ್ಟೋಬರ್ 10ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






