ಸಾಂಸ್ಕೃತಿಕ
ಡಾ.ಗಣೇಶ್ ಗಂಗೊಳ್ಳಿ ಅವರಿಗೆ ‘ಬೇಂದ್ರೆ ನುಡಿಸಿರಿ’ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Views: 4
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಭವನದಲ್ಲಿ ಜರುಗಿದ ಧಾರವಾಡ ನುಡಿ ಸಡಗರ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಹಾಗೂ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಘಟಕದ ಜಿಲ್ಲಾಧ್ಯಕ್ಷರು ಆದ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಬೇಂದ್ರೆ ನುಡಿಸಿರಿ ರಾಷ್ಟೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇವರ 32 ವರ್ಷದ ಕಲಾ ಸೇವೆಯನ್ನು ಪರಿಗಣಿಸಿ ಕನಕ ಅಧ್ಯಯನ ಪೀಠ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ,ಚೇತನ ಪೌಂಡೇಶನ್ ಇದರ ಸಂಯೋಜಕರಾದ ಶ್ರೀ ಚಂದ್ರಶೇಖರ್ ಮಾಡಲಗೆರಿ ಹಾಗೂ ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ ಸಂಯೋಜಕರಾದ ಡಾ.ಹನುಮ ಗೌಡ ಸಿ. ಅವರು ಬೇಂದ್ರೆ ನುಡಿಸಿರಿ ರಾಷ್ಟೀಯ ಪ್ರಶಸ್ತಿಯನ್ನು ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಪ್ರದಾನ ಮಾಡಿ, ಗೌರವಿಸಿದರು.
.ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ನರೇಂದ್ರ ಕುಮಾರ್ ಕೋಟ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು






