ಕರಾವಳಿ
ಟ್ರಕ್ಕಿಂಗ್‌ಗೆ ಬಂದಿದ್ದ ಯುವಕ ನಾಪತ್ತೆ; ಬೈಕ್, ಟೀಶರ್ಟ್, ಮೊಬೈಲ್ ಪತ್ತೆ: ರಾಣಿಝರಿ ಪಾಯಿಂಟ್‌ನಲ್ಲಿ ಪೊಲೀಸರ ಹುಡುಕಾಟ

Views: 4
ಚಿಕ್ಕಮಗಳೂರು: ಬೆಂಗಳೂರಿನಿಂದ ಟ್ರಕ್ಕಿಂಗಿಗೆ ಬಂದಿದ್ದ ಯುವಕ ನಾಪತ್ತೆ ಆಗಿರೋ ಘಟನೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿ ನಡೆದಿದೆ. ರಾಣಿಝರಿ ಪಾಯಿಂಟ್‌ನಲ್ಲಿ ಬೈಕ್ ನಿಲ್ಲಿಸಿದ ಯುವಕನ ಟೀ ಶರ್ಟ್, ಮೊಬೈಲ್, ಸ್ಲಿಪರ್‌ಗಳು ಗುಡ್ಡದ ತುದಿಯಲ್ಲಿ ಪತ್ತೆಯಾಗಿದೆ.
ಬಿ.ಇ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭರತ್ ಅವರು ಬೆಂಗಳೂರಿನಿಂದ ಹಾರ್ನೆಟ್ ಬೈಕ್‌ನಲ್ಲಿ ಬಂದಿದ್ದ. ದುರ್ಗದಹಳ್ಳಿಗೆ ಬಂದಿದ್ದ ಭರತ್ ಮಿಸ್ಸಿಂಗ್ ಆಗಿದ್ದು, ಹುಡುಕಿಕೊಂಡು ಬಂದ ಪೋಷಕರು ಮೊರೆ ಇಟ್ಟಿದ್ದಾರೆ.
ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿರೋ ರಾಣಿಝರಿ ಪಾಯಿಂಟ್ ಇದಾಗಿದ್ದು ಭರತ್ ಹೇಗೆ ಮಿಸ್ ಆದ ಅನ್ನೋದು ಗೊತ್ತಾಗಿಲ್ಲ. ಮಿಸ್ ಆಗಿರೋ ಭರತ್‌ಗಾಗಿ ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಯಿಂದ ತೀವ್ರ ಹುಡುಕಾಟ ಆರಂಭವಾಗಿದೆ.