ಸಾಂಸ್ಕೃತಿಕ

ಟೋಬಿ ಚೆನ್ನಾಗಿಲ್ಲ ಎಂದ ಮಹಿಳೆಗೆ ಥಿಯೇಟರ್ ಮುಂದೆ ನಿಂದನೆ: ಕ್ಷಮೆಯಾಚಿಸಿದ ರಾಜ್.ಬಿ ಶೆಟ್ಟಿ

Views: 1

ಟೋಬಿ ಚೆನ್ನಾಗಿಲ್ಲ’ ಎಂದ ಮಹಿಳೆಗೆ ಥಿಯೇಟರ್ ಮುಂದೆ ಅವಾಚ್ಯವಾಗಿ ನಿಂದಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ಲಾಗಿ ಪರ- ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

‘ಟೋಬಿ’ ವರಮಹಾಲಕ್ಷ್ಮೀ ಹಬ್ಬದ ದಿನದಂದು ಬಿಡುಗಡೆಗೊಳಿಸಿ ಸಿನಿ ಪ್ರೇಕ್ಷಕರಿಗೆ ಸರ್ಪ್ರೈಸ್ ಕೊಟ್ಟಿದ್ದು, ರಾಜ್.ಬಿ ಶೆಟ್ಟಿ ನಟನೆಯ ಚಿತ್ರ ನೆರೆ ರಾಜ್ಯಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಸಿನಿಮಾ ನೋಡಿದ ಹಲವಾರು ಮಂದಿ ಹಲವು ರೀತಿಯ ಅಭಿಪ್ರಾಯ ತಿಳಿಸುತ್ತಿದ್ದಾರೆ. ಆದರೆ ಈ ನಡುವೆ ಮಹಿಳೆ ಟೋಬಿ ಚೆನ್ನಾಗಿಲ್ಲ ಅಭಿಪ್ರಾಯಕ್ಕೆ ವ್ಯಕ್ತಿ ಯೊಬ್ಬರು ಮಹಿಳೆಗೆ ನಿಂದಿಸಿರುವ ಘಟನೆ ನಡೆದಿರುವುದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಿನಿಮಾ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇಲ್ಲವೇ…. ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ವೈರಲ್ ಆಗ್ತಿದಂತೆ ಎಚ್ಚೆತ್ತುಕೊಂಡ ಈ ಚಿತ್ರದ ಚಿತ್ರಕಥೆಗಾರ ದಯಾನಂದ್ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಿದ್ದಾರೆ.

ಬೆನ್ನಲ್ಲೇ ರಾಜ್ ಬಿ ಶೆಟ್ಟಿ ಕೂಡ ಕ್ಷಮೆಯಾಚಿಸಿದ್ದಾರೆ. ಮಹಿಳೆಗೆ ನಿಂದಿಸಿದ ಈ ವ್ಯಕ್ತಿ ನಮ್ಮ ಚಿತ್ರತಂಡಕ್ಕೆ ಸಂಬಂಧಿಸಿದವನಲ್ಲ ಎಂದು ಸ್ಪಷ್ಟಪಡಿಸಿದರು.

Related Articles

Back to top button
error: Content is protected !!