ಸಾಂಸ್ಕೃತಿಕ

ಟಾಲಿವುಡ್‌ನಲ್ಲಿ ಅವಕಾಶ ಪಡೆದ ಕಾಂತಾರ ಚೆಲುವೆ ಸಪ್ತಮಿ ಗೌಡ

Views: 63

ಬೆಂಗಳೂರು:  ತೆಲುಗಿನ ತಮ್ಮಡು ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಪ್ತಮಿ ಗೌಡ ಕುದುರೆ ಸವಾರಿಯನ್ನೂ ಕಲಿಯುತ್ತಿದ್ದಾರೆ. “ನಾನು ಹಾರ್ಸ್‌ ರೈಡಿಂಗ್‌ ಕಲಿಯುತ್ತಿದ್ದೇನೆ. ಇನ್ನೂ ಪೂರ್ಣವಾಗಿ ಕಲಿತಿಲ್ಲ. ಇನ್ನೂ ಕಲಿಯುತ್ತಿದ್ದೇನೆ. ಸಿನಿಮಾದಲ್ಲಿ ನನ್ನ ಪಾತ್ರದ ಕುರಿತು ಮಾಹಿತಿ ನೀಡುವಂತೆ ಇಲ್ಲ” ಎಂದು ನಟಿ ಸಪ್ತಮಿ ಗೌಡ ಹೇಳಿದ್ದಾರೆ. ನಿತಿನ್‌ ನಟನೆಯ ತಮ್ಮಡು ಸಿನಿಮಾದಲ್ಲಿ ಸಪ್ತಮಿ ಗೌಡ ಮಾತ್ರವಲ್ಲದೆ ನಟಿ ಲಯಾ ಕೂಡ ನಟಿಸುತ್ತಿದ್ದಾರೆ. ಇದು ಶ್ರೀರಾಮ್‌ ವೇಣು ನಿರ್ದೇಶನದ ಚಲನಚಿತ್ರವಾಗಿದೆ.

ನಿತಿನ್‌ ನಟನೆಯ ತಮ್ಮಡು ಸಿನಿಮಾದಲ್ಲಿ ಅವಕಾಶ ದೊರಕಿರುವುದನ್ನು ಸಪ್ತಮಿ ಗೌಡ ಖಚಿತ ಪಡಿಸಿದ್ದಾರೆ. “ನಿತಿನ್‌ ತಮ್ಮಡು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಈ ಚಲನಚಿತ್ರದ ಶೂಟಿಂಗ್‌ ಆರಂಭವಾಗಿದೆ. ನಾನು ಶೂಟಿಂಗ್‌ ಸೆಟ್‌ ಸೇರಿಕೊಳ್ಳಬೇಕಿದೆ” ಎಂದು ಸಪ್ತಮಿ ಗೌಡ ಹೇಳಿದ್ದಾರೆ. ಈ ಹಿಂದೆಯೇ ಟಾಲಿವುಡ್‌ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸುವ ಕುರಿತು ಸುದ್ದಿಗಳಿದ್ದವು. ಇದೀಗ ಸಪ್ತಮಿ ಗೌಡ ಅಧಿಕೃತವಾಗಿ ಈ ಕುರಿತು ಮಾಹಿತಿ ನೀಡಿದ್ದಾರೆ.

ನಟಿ ಸಪ್ತಮಿ ಗೌಡ ಇತ್ತೀಚೆಗೆ ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಸಪ್ತಮಿ ಪಾತ್ರ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿರಲಿಲ್ಲ. ಯುವ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗಿತ್ತು. ಹೊಂಬಾಳೆ ಫಿಲ್ಮ್ಸ್‌ನ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಈ ಸಿನಿಮಾದಲ್ಲಿ ಯುವನ ಪ್ರೇಯಸಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದರು.

ಕಾಂತಾರ ಸಿನಿಮಾದಲ್ಲಿ ಖ್ಯಾತಿ ಗಳಿಸುವ ಮೊದಲು ಸಪ್ತಮಿ ಗೌಡ ಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದಲ್ಲಿ ನಟಿಸಿದ್ದರು. 2022ರಲ್ಲಿ ರಿಷಬ್‌ ಶೆಟ್ಟಿ ನಿರ್ದೇಶನ-ನಟನೆಯ ಕಾಂತಾರ ಸಿನಿಮಾದಲ್ಲಿ ನಟಿಸಿದ್ದರು. ಇದು ಸಪ್ತಮಿ ಗೌಡರ ಖ್ಯಾತಿಯನ್ನು ಹೆಚ್ಚಿಸಿತ್ತು. ಬಾಲಿವುಡ್‌ನ ವಿವೇಕ್‌ ಅಗ್ನಿಹೋತ್ರಿಯವರ ದಿ ವ್ಯಾಕ್ಸಿನ್‌ ವಾರ್‌ ಸಿನಿಮಾದಲ್ಲಿ ನಟಿಸಿದ್ದರು. ರಶ್ಮಿಕಾ ಮಂದಣ್ಣ, ಶ್ರೀಲೀಲಾರಂತೆ ಸಪ್ತಮಿ ಗೌಡ ಕೂಡ ಟಾಲಿವುಡ್‌ನಲ್ಲಿ ಅವಕಾಶ ಪಡೆದಿದ್ದಾರೆ.

 

Related Articles

Back to top button
error: Content is protected !!