ಜ.22ಕ್ಕೆ ಬಾರ್ಕೂರಿನಲ್ಲಿ ಶೋಭಾ ರಾಮಾಯಣ ಗ್ರಂಥ ಲೋಕಾರ್ಪಣೆ

Views: 176
ಉಡುಪಿ: ಕರಾವಳಿ ಪದ್ಮಶಾಲಿಗರ (ಶೆಟ್ಟಿಗಾರ್) ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 22ರಂದು ಸೋಮವಾರ ಬೆಳಿಗ್ಗೆ 9ಕ್ಕೆ ಸಾಹಿತಿ ಶ್ರೀಮತಿ ಶೋಭಾ ಹರಿಪ್ರಸಾದ್ ಶೆಟ್ಟಿಗಾರ್ ಅವರ ಮಹೋನ್ನತ ಗ್ರಂಥ ಶೋಭಾ ರಾಮಾಯಣ ಲೋಕಾರ್ಪಣೆಗೊಳ್ಳಲಿದೆ.

ಮಾ. ಅನ್ವಿತ್ ‘ಶೋಭಾ ರಾಮಾಯಣ’ ಗ್ರಂಥದ ಅನಾವರಣ ಮಾಡಲಿದ್ದಾರೆ.
ಶ್ರೀ ಕ್ಷೇತ್ರ ಬಾರ್ಕೂರು ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾರಕೂರು- ರಂಗನಕೆರೆ ಶ್ರೀ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ಪಾದೇಕಲ್ಲು ವಿಷ್ಣು ಭಟ್ ಆತ್ರಾಡಿ, ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಭುವನ ಪ್ರಸಾದ್ ಮಣಿಪಾಲ, ಪದ್ಮಲೇಖ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಗಿರೀಶ್ ಶೆಟ್ಟಿಗಾರ್ ವಿಟ್ಲ, ಕಲ್ಯಾಣಪುರ ಮಿಲಾಗ್ರಿಸ್ ಪದವಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ಡಾ.ಸಿ.ಜಯರಾಮ ಶೆಟ್ಟಿಗಾರ್ ಇವರಿಂದ ಶುಭಾಶಂಸನೆ,
‘ಶೋಭಾ ರಾಮಾಯಣ’ ಗ್ರಂಥದ ಕುರಿತು ಜಯಶ್ರೀ ಭಟ್ ಅವರಿಂದ ಅವಲೋಕನ, ಉಡುಪಿ ಕನ್ನಡ ತುಳು ಸಾಹಿತ್ಯ ವೇದಿಕೆ ಹಾಗೂ ಹೊಂಗಿರಣ ಸಾಹಿತ್ಯ ಬಳಗದವರಿಂದ ಗ್ರಂಥದ ವಾಚನ ಮತ್ತು ಗಾಯನ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಾರ್ಕೂರು ಶ್ರೀ ಕ್ಷೇತ್ರದ ಆಡಳಿತ ಹಾಗೂ ಶ್ರೀ ಹರಿಪ್ರಸಾದ್ ಮತ್ತು ಶ್ರೀಮತಿ ಶೋಭಾ ಹರಿಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







