ಸಾಂಸ್ಕೃತಿಕ

ಜೈಲಿನಲ್ಲಿರುವ ಪತಿಯ ಬಿಡುಗಡೆಗೆ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ಪತ್ನಿ

Views: 113

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ದರ್ಶನ್ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮಿ ಮುಂದಾಗಿದ್ದು ಇದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.

ಪ್ರಕರಣದಲ್ಲಿ ದರ್ಶನ್ ಭಾಗಿ ಬಗ್ಗೆ ಮಾತನಾಡುವಾಗ ಪೊಲೀಸ್ ಆಯುಕ್ತರು ಪವಿತ್ರಾ ಗೌಡ ದರ್ಶನ್ ಪತ್ನಿ ಎಂದಿದ್ದರು. ಇದಾದ ಬಳಿಕ ರಾಷ್ಟ್ರವ್ಯಾಪಿ ಮಾದ್ಯಮಗಳಲ್ಲಿ ಪವಿತ್ರಾ ಗೌಡ ದರ್ಶನ್ ಪತ್ನಿ ಎಂದೇ ಪ್ರಸಾರವಾಯಿತು. ಈ ವಿಚಾರವಾಗಿ  ವಿಜಯಲಕ್ಷ್ಮೀ ಸಿಡಿಮಿಡಿಗೊಂಡಿದ್ದಾರೆ.

ಜೈಲಿನಲ್ಲಿರುವ ದರ್ಶನ್ ಮೇಲೆ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಇರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ಗಂಡ ದರ್ಶನ್ ಅವರನ್ನು ಜೈಲಿಂದ ಕರೆತರಲು ವಿಜಯಲಕ್ಷ್ಮೀ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ಇದೀಗ ಶಕ್ತಿ ದೇವತೆ ಮಹಾಕಾಳಿ ಮೊರೆ ಹೋಗಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂನಲ್ಲಿರುವ ಶ್ರೀ ಬಂಡೇ ಮಹಾಕಾಳಿ ದೇವಸ್ಥಾನಕ್ಕೆ ತೆರೆಳಿದ ವಿಜಯಲಕ್ಷ್ಮೀ, ಜೈಲಿನಲ್ಲಿರುವ ಪತಿಯ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

Related Articles

Back to top button
error: Content is protected !!