ಜನಮನ
ಜೂನ್ 15 ರಿಂದ ಗೃಹ ಜ್ಯೋತಿ ನೋಂದಣಿ

Views: 0
ಗೃಹ ಬಳಕೆ ಗ್ರಾಹಕರು ಸೇವಾ ಸಿಂಧು ಪೋಟ್೯ಲ್ ನಲ್ಲಿ ನೋಂದಾವಣೆ ಜೂ. 15 ರಂದು ಆರಂಭವಾಗುತ್ತದೆ.
2023 ಜುಲೈನಲ್ಲಿ ಬಳಸಿದ ವಿದ್ಯುತ್ ಬಳಕೆಯನ್ನು ಅಗಸ್ಟ್ 2023 ರಲ್ಲಿ ನೀಡುವ ಬಿಲ್ ಅನ್ವಯವಾಗುವಂತೆ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಗ್ರಾಮ ಒನ್, ಕನಾ೯ಟಕ ಒನ್, ಬೆಂಗಳೂರು ಒನ್ ಮೂಲಕ ಅಜಿ೯ ಸಲ್ಲಿಸಬಹುದಾಗಿದೆ.
ಆಧಾರ್ ಸಂಖ್ಯೆ /ಗ್ರಾಹಕರ ಸಂಖ್ಯೆ /ಬಾಡಿಗೆ ಕರಾರು ಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಒಬ್ಬ ಗ್ರಾಹಕ ಒಂದು ಮೀಟರ್ ಗೆ ಮಾತ್ರ ಯೋಜನೆಗೆ ಅಹ೯ನಾಗಿರುತ್ತಾನೆ. ಸೇವಾ ಸಿಂಧುವಿನಿಂದ ಸ್ವೀಕೃತಿ ಸಂದೇಶವನ್ನು SMS/ ಇಮೇಲ್ ಮೂಲಕ ತಿಳಿಸಲಾಗುತ್ತದೆ.






