ಕೃಷಿ
ಜೂನ್ 10 ಮತ್ತು 11 ರಂದು ಬ್ರಹ್ಮಾವರದಲ್ಲಿ “ಹಣ್ಣು ಮೇಳ”

Views: 2
ಬೃಹ್ಮಾವರ : ಇದೇ ಜೂನ್ 10 ಮತ್ತು 11 ರಂದು ಬೃಹ್ಮಾವರ ಎಸ್ಎಂಎಸ್ ಸಮುದಾಯ ಭವನದಲ್ಲಿ ವಿವಿಧ ತಳಿಯ ಹಣ್ಣುಗಳ ಪ್ರದಶ೯ನ ಮತ್ತು ಮಾರಾಟ “ಹಣ್ಣುಗಳ ಮೇಳ” ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಎರಡು ದಿನ ನಡೆಯಲಿದೆ.
ಬೃಹ್ಮಾವರ ಕೃಷಿ ಇಲಾಖೆ ಹಾಗೂ ರೋಟರಿ ಆಶ್ರಯದಲ್ಲಿ ನಡೆಯಲಿರುವ ಈ ಮೇಳದಲ್ಲಿ ಇತ್ತೀಚೆಗೆ ರೈತರು ಹೊಸ ಹೊಸ ತಳಿಯ ಹಣ್ಣುಗಳನ್ನು ಬೆಳೆಸುತ್ತಿದ್ದಾರೆ ಅದರ ಮಾರಾಟ ಮತ್ತು ಪ್ರದಶ೯ನದ ಜೊತೆಗೆ ವಿವಿಧ ತಳಿಯ ಹಣ್ಣಿನ ಗಿಡಗಳು ಮತ್ತು ಹೂವಿನ ಗಿಡಗಳು ದೊರೆಯುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.








