ಕರಾವಳಿ
ಜೂನ್ ತಿಂಗಳಲ್ಲಿ ಇನ್ನಷ್ಟು ವಿದ್ಯುತ್ ದರ ಹೆಚ್ಚಳ : ಗ್ರಾಹಕರಲ್ಲಿ ಗೊಂದಲ

Views: 0
ಕುಂದಾಪುರ : ಮೆಸ್ಕಾಂ ವಿದ್ಯುತ್ ಬಿಲ್ ಹೆಚ್ಚಳ ಕಂಡು ಬಂದಿದ್ದು, ಜೂನ್ ತಿಂಗಳಿಂದ ಯೂನಿಟ್ ಗೆ 2.3 ರೂಗಳಷ್ಟು ಹೆಚ್ಚಳದಿಂದ ಗ್ರಾಹಕರು ಗೊಂದಲಕ್ಕೆ ಒಳಗಾಗಿದ್ದಾರೆ.
ಯೂನಿಟ್ ಗೆ 70 ಪೈಸೆ ದರ ಹೆಚ್ಚಳ ಮೇ ತಿಂಗಳಿಂದ ಬಂದಿದೆ. ಆದರೆ, ಎಪ್ರಿಲ್ ತಿಂಗಳ ಬಾಕಿಯನ್ನು ಮುಂಬರುವ ಬಿಲ್ ನಲ್ಲಿ ವಸೂಲು ಮಾಡಲಾಗುತ್ತದೆ. ಮೇ ತಿಂಗಳ ಬಿಲ್ ಬಾಬ್ತು ಎಫ್ ಎಸಿ ಯೂನಿಟ್ ಗೆ 93 ಪೈಸೆ ಇರಲಿದ್ದು, ಎಪ್ರಿಲ್ ಮತ್ತು ಮೇ ತಿಂಗಳಿಂದ 1.40 ರೂ. ಎಫ್ ಎಸಿ 93 ಪೈಸೆ ಯೂನಿಟ್ ಮೇಲೆ 2.33 ರೂ. ಹೆಚ್ಚುವರಿ ಬೀಳಲಿದೆ.
ಎಫ್ ಎಸಿ ( ಇಂದನ ಖರೀದಿ ನಿವ೯ಹಣಾ ಶುಲ್ಕ) ದಲ್ಲಿ ಇಳಿಕೆಯಾದಾಗ ಗ್ರಾಹಕರಿಗೆ ಹಿಮ್ಮರಳಿಸಲಾಗುತ್ತದೆ. ಹೆಚ್ಚಳದ ದರ ಗ್ರಾಹಕರಿಂದ ವಸೂಲಿಮಾಡಲಾಗುತ್ತದೆ ಎಂದು ಮಂಗಳೂರು ಹಿರಿಯ ಕಾಯ೯ನಿವಾ೯ಹಕ ಎಂಜಿನಿಯರ್ ಮೆಸ್ಕಾಂ ವಾಣಿಜ್ಯ ವಿಭಾಗದ ದಿನೇಶ್ ತಿಳಿಸಿದ್ದಾರೆ.
ಉಷ್ಣ ವಿದ್ಯುತ್ ಸ್ಥಾವರಗಳು ವಿದ್ಯುತ್ ಉತ್ಪಾದನೆಗೆ ಬಳಸುವ ಕಲ್ಲಿದ್ದಲಿನ ದರ ಏರಿಳಿತದಿಂದಾಗಿ ಗ್ರಾಹಕರಿಗೆ ವಗಾ೯ಯಿಸಲಾಗುತ್ತದೆ.






