ಜುಲೈ 6ರಂದು ಯಡಾಡಿ-ಮತ್ಯಾಡಿಯಲ್ಲಿ ಕುಂದಾಪ್ರ ಕನ್ನಡ ಸಾಂಸ್ಕೃತಿಕ ರಂಗಾಭಿವ್ಯಕ್ತಿ, ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ಮತ್ತು ‘ವಿದ್ಯಾರಣ್ಯ ಪುರಸ್ಕಾರ’ ಪ್ರದಾನ ಸಮಾರಂಭ
Views: 25
ಕನ್ನಡ ಕರಾವಳಿ ಸುದ್ದಿ: ಯಾರು ನಮ್ಮ ಭಾಷೆ ಸಂಸ್ಕೃತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೋ ಅಲ್ಲಿ ನಮ್ಮ ಕುಂದಾಪ್ರ ಕನ್ನಡ ಅಧ್ಯಯನ ಪೀಠದಿಂದ ಕಾರ್ಯಕ್ರಮಗಳನ್ನು ಮಾಡಲಿದ್ದೇವೆ. ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಅವರ ಪೋಷಕರು ಕೂಡ ಭಾಗವಹಿಸಬೇಕು ಎಂದು ಮಾಜಿ ಸಂಸದರು ಹಾಗೂ ಮಂಗಳೂರು ವಿವಿಯ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಮಾನ್ಯ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಯಡಾಡಿ ಮತ್ಯಾಡಿಯ ವಿದ್ಯಾರಣ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪ್ರ ಕನ್ನಡ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿ ಹಾಗೂ ಸುಜ್ಞಾನ ಪದವಿ ಪೂರ್ವ ಕಾಲೇಜು ಯಡಾಡಿ – ಮತ್ಯಾಡಿ ಜಂಟಿ ಆಶ್ರಯದಲ್ಲಿಜು.6ರಂದು ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಶಾಲಾ ಆವರಣದಲ್ಲಿ ನಡೆಯಲಿರುವ ಕುಂದಾಪ್ರ ಕನ್ನಡ ಭಾಷಿಕ ಬೈಂದೂರು, ಕುಂದಾಪುರ, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕಿನ ಪಿಯುಸಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕುಂದಾಪ್ರ ನೆಲಮೂಲದ ಸಾಂಸ್ಕೃತಿಕ ಅನನ್ಯತೆಯ ರಂಗಾಭಿವ್ಯಕ್ತಿ ಹಾಗೂ ಚಿತ್ರಕಲಾ ಸ್ಪರ್ಧೆ: ‘ವಾಲ್ಬೆಲ್ಲ’ ಇದು ಕುಂದಾಪ್ರ ಕನ್ನಡದ ಸಿಹಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರದ ಅಧ್ಯಕ್ಷ ಡಾ| ರಮೇಶ ಶೆಟ್ಟಿ ಅವರು ಮಾತನಾಡಿ, ಕುಂದಾಪ್ರ ಕನ್ನಡ ಭಾಷೆಯ ಅಭಿವೃದ್ಧಿಗೆ ಒತ್ತು ನೀಡಬೇಕು ಎನ್ನುವ ಸದುದ್ದೇಶದಿಂದ ಕರ್ನಾಟಕ ಸರಕಾರ ಮಂಗಳೂರು ವಿವಿಯ ಅಧೀನದಲ್ಲಿ ಪೂರ್ಣ ಪ್ರಮಾಣದ ಕುಂದಾಪ್ರ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸಿದೆ. ಈ ಪೀಠದ ಚಟುವಟಿಕೆಗಳಿಗೆ ಪೂರಕವಾಗಿ, ಸಾಂಪ್ರದಾಯಿಕ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಈ ನೆಲದ ಕಲೆ, ಸಂಗೀತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸೊಗಡನ್ನು ಪರಿಚಯಿಸುವ ಮಹತ್ತರ ಆಶಯದೊಂದಿಗೆ ಕಾರ್ಯಾಚರಿಸುತ್ತಿರುವ ಕುಂದಾಪುರದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ತನ್ನ ಯಡಾಡಿ-ಮತ್ಯಾಡಿಯ ವಿದ್ಯಾಸಂಸ್ಥೆಗಳ ಆವರಣದಲ್ಲಿ ಅಪೂರ್ವ ಸಾಂಸ್ಕೃತಿಕ ಹಬ್ಬವನ್ನು ಮಾಡಬೇಕು ಎನ್ನುವ ಸಂಕಲ್ಪ ಮಾಡಲಾಗಿದೆ ಎಂದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರದ ಖಜಾಂಚಿ ಭರತ್ ಶೆಟ್ಟಿ ಅವರು ಮಾತನಾಡಿ, ಈ ವರ್ಷದಿಂದ ವಾರ್ಷಿಕ ‘ವಿದ್ಯಾರಣ್ಯ ಪುರಸ್ಕಾರ’ವನ್ನು ಆರಂಭಿಸಿದೆ. ಮೊದಲ ವರ್ಷದ ಪುರಸ್ಕಾರವನ್ನು ಕುಂದಾಪ್ರ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ ಕೈ ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೂ ಹಾಗೂ ಆಸಕ್ತರಿಗೂ ಕೋಟೇಶ್ವರ, ಬಿದ್ಕಲ್ ಕಟ್ಟೆ ಹಾಗೂ ಶಿರಿಯಾರ ಭಾಗದಿಂದ ಬರುವವರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಪಂಜು ಗಂಗೊಳ್ಳಿ ಪತ್ರಕರ್ತ ರಾಜೇಶ್ ಕೆ.ಸಿ., ಉದಯ ಕುಮಾರ್ ಪಡುಕರೆ ಮತ್ತಿತರರಿದ್ದರು. ಪವಿತ್ರಾ ಅವರು ಸಹಕರಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಗಳಾದ ರಾಜು ಮೊಗವೀರ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕರಾಗಿರುವ ವೃತ್ತಿ ಸೇವೆಯಿಂದ ನಿವೃತ್ತರಾದ ಪ್ರೊ| ನಾಗಪ್ಪ ಗೌಡ ಆರ್. ಅವರಿಗೆ ಗೌರವಾಭಿನಂದನೆ ನಡೆಯಲಿದೆ.
ಉದ್ಘಾಟನೆಯನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ನೆರವೇರಿಸಲಿದ್ದಾರೆ. ಶಾಸಕರಾದ ಎ. ಕಿರಣ್ ಕುಮಾರ್‌ಕೊಡ್ಡಿ ಮಾಜಿ ಸಚಿವರು ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಕೆ. ಜಯಪ್ರಕಾಶ್ ಹೆಗ್ಡೆ ಮಂಗಳೂರು ವಿವಿ ಕುಲಪತಿಗಳಾದ ಪ್ರೊ| ಪಿ.ಎಲ್. ಧರ್ಮ, ಪ್ರಭಾರ ಕುಲಸಚಿವರಾದ ಪ್ರೊ| ಗಣೇಶ್ ಸಂಜೀವ, ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಂಶಂಕರ್, ಕುಂದಾಪುರದ ಸಹಾಯಕ ಆಯುಕ್ತರಾದ ರಶ್ಮಿ ಎಸ್. ಆರ್. ಶಿಕ್ಷಣ ಇಲಾಖೆಯ ಗಣ್ಯರಾದ ಮಾರುತಿ ಎಲ್. ರವೀಂದ್ರ ಉಪಾಧ್ಯ ಹಾಗೂ ಲೋಕೇಶ್ ಪಿ. ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.






