ರಾಜಕೀಯ

ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರನನ್ನು ಕೆಳಗಿಳಿಸದಿದ್ದರೆ ಹಿಂದುತ್ವದ ಆಧಾರದ ಮೇಲೆ ಪ್ರಾದೇಶಿಕ ಪಕ್ಷ ಕಟ್ಟುವೆ: ಯತ್ನಾಳ್ 

Views: 28

ಕನ್ನಡ ಕರಾವಳಿ ಸುದ್ದಿ: ನನಗೇನೂ ಗಡಿಬಿಡಿ ಇಲ್ಲ, ಇನ್ನೂ ಮೂರು ವರ್ಷ ಸಮಯವಿದೆ, ಒಂದು ವೇಳೆ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸದೇ ಹೋದರೆ ಹಿಂದುತ್ವದ ಆಧಾರದ ಮೇಲೆ ಪ್ರಾದೇಶಿಕ ಪಕ್ಷ ಕಟ್ಟುವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಯಾವತ್ತೂ ಬಿಟ್ಟಿಲ್ಲ, ಬಿಜೆಪಿ ನನ್ನ ಮಾತೃಸ್ಥಾನದಲ್ಲಿರುವ ಪಕ್ಷ, ಅವರೇ ನನಗೆ ಹೊರಗೆ ಹಾಕಿದ್ದಾರೆ. ವಿಜಯೇಂದ್ರನನ್ನು ಸಹ ಉಚ್ಚಾಟನೆ ಮಾಡಬೇಕು. ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಿದ್ದಾಗಲೂ ಹಿಂದೂ ಕಾರ್ಯಕರ್ತರು, ಹೋರಾಟಗಾರರು ಸುರಕ್ಷಿತರವಾಗಿರಲಿಲ್ಲ, ಆಗ ನನಗೆ ಮುಖ್ಯಮಂತ್ರಿ ಮಾಡಿದ್ದರೆ ಯಾವೊಬ್ಬ ಆಗದಂತೆ ನೋಡಿಕೊಳ್ಳುತ್ತಿದ್ದೆ ಹಿಂದೂ ಕಾರ್ಯಕರ್ತನಿಗೂ ಏನು ಎಂದರು.

ಕೆ.ಎಸ್. ಈಶ್ವರಪ್ಪ ಅವರ ನೆಲೆ ನನಗೆ ಇನ್ನೂ ಹತ್ತಿಲ್ಲ, ಅವರು ಯಾವಾಗ ವಿಜಯೇಂದ್ರನನ್ನು ಹೊಗಳುತ್ತಾರೋ, ಯಾವಾಗ ತೆಗಳುತ್ತಾರೋ ಗೊತ್ತಿಲ್ಲ ಎಂದರು. ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ ಎಲ್ಲರೂ ನನ್ನಿಂದ ದೂರವಾಗಿದ್ದಾರೆ ಎಂಬುದು ತಪ್ಪು, ಎಲ್ಲರೂ ನನ್ನ ಜೊತೆಯೇ ಇದ್ದಾರೆ. ಯಾರೂ ದೂರವಾಗಿಲ್ಲ, ಮೊದಲಿಗಿಂತಲೂ ಅವರು ಹತ್ತಿರವಾಗಿದ್ದಾರೆ ಎಂದರು.

Related Articles

Back to top button
error: Content is protected !!