ಪ್ರವಾಸೋದ್ಯಮ
ಜಿಮ್ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿರುವ ಜಲಪಾತದ ನೀರಿಗೆ ಹಾರಿದ್ದ ಯುವಕ ದಾರುಣ ಸಾವು

Views: 159
ಮುಂಬೈ: ಜಿಮ್ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ಈಜಾಡಲೆಂದು ಜಲಪಾತದ ನೀರಿಗೆ ಹಾರಿ ಕೊಚ್ಚಿಕೊಂಡು ಹೋದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ತನ್ನ ಜೊತೆ ಜಿಮ್ ಮಾಡುವ 32 ಸ್ನೇಹಿತರೊಂದಿಗೆ ಯುವಕ ಪ್ರವಾಸಕ್ಕೆಂದು ಬಂದಿದ್ದನು. ಈ ವೇಳೆ ತಮ್ಹಿನಿ ಘಾಟ್‌ನ ಜಲಪಾತಕ್ಕೆ ಈಜಾಡಲೆಂದು ಜಂಪ್ ಮಾಡಿದ್ದಾನೆ. ಆದರೆ ನೀರಿನ ರಭಸಕ್ಕೆ ಜೋರಾಗಿದ್ದರಿಂದ ಈಜಲು ಸಾಧ್ಯವಾಗದೆ ಹಾಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಯುವಕ ಈಜಲೆಂದು ಜಲಪಾತದ ನೀರಿಗೆ ಜಂಪ್ ಮಾಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಯುವಕನು ನೀರಿಗೆ ಜಿಗಿದು ಈಜಿ ದಡ ಸೇರಲು ಮುಂದಾಗುತ್ತಾನೆ. ಆದರೆ ನೀರಿನ ಹರಿಯುವ ರಭಸ ಜೋರಾಗಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾನೆ. ಯುವಕನ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದ್ದು ಇದುವರೆಗೂ ಪತ್ತೆಯಾಗಿಲ್ಲ ಎಂದು ರಕ್ಷಣ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಹುಡುಕಾಟ ಮುಂದುವರೆದಿದೆ ಎಂದು ಹೇಳಲಾಗಿದೆ.