ಚಿನ್ನದ ಪದಕ ಗೆದ್ದ ‘ಕಾಂತಾರ’ದ ಅಪ್ಪು-ಕಿಟ್ಟಿ ಕೋಣಗಳು

Views: 484

ಬೆಂಗಳೂರು: ಕಾಂತಾರ ಸಿನೆಮಾದಲ್ಲಿ ನಟ ರಿಷಭ್ ಶೆಟ್ಟಿ ಓಡಿಸಿದ್ದ ಎರಡು ಕೋಣಗಳು ಇಂದು ನಡೆದ ಬೆಂಗಳೂರು ಕಂಬಳ ಕ್ರೀಡೆಯಲ್ಲಿ ಮೊದಲ ಸ್ಥಾನ ಪಡೆದು ಪದಕ ಗೆದ್ದಿವೆ.
ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ‘ಬೆಂಗಳೂರು ಕಂಬಳ’ ಕ್ರೀಡೆಯಲ್ಲಿ ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಓಡಿಸಿದ್ದ ಅಪ್ಪು-ಕಿಟ್ಟಿ ಎಂಬ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪದಕ ಗೆದ್ದುಕೊಂಡಿದೆ.

ಉಡುಪಿ ಜಿಲ್ಲೆಯ ಬೈಂದೂರಿನ ಪರಮೇಶ್ವರ್ ಭಟ್ ಅವರ ಅಪ್ಪು ಮತ್ತು ಕಿಟ್ಟಿ ಕೋಣಗಳು ಬೆಂಗಳೂರು ಕಂಬಳದಲ್ಲಿ ಭಾಗಿಯಾಗಿದ್ದವು. ಕಾಂತಾರ ಸಿನಿಮಾದಲ್ಲಿ ಈ ಕೋಣಗಳು ಕಾಣಿಸಿಕೊಂಡಿದ್ದವು.ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಅಪ್ಪು ಮತ್ತು ಕಿಟ್ಟಿ ಎಂಬ ಕೋಣಗಳನ್ನು ಓಡಿಸಿ ಬಹುಮಾನವನ್ನು ಗೆಲ್ಲುತ್ತಾರೆ. ಇದೇ ಕೋಣಗಳು ಬೆಂಗಳೂರಿನ ಕಂಬಳ ಕ್ರೀಡೆಯಲ್ಲೂ ಮೊದಲ ಸ್ಥಾನ ಗೆದ್ದಿವೆ.
ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಇಂದು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಈ ಕೋಣಗಳನ್ನು ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದರು.








