ರಾಜಕೀಯ

ಚನ್ನಪಟ್ಟಣ ಚುನಾವಣೆ:ಗೋಡೌನ್‌ ಮೇಲೆ ದಾಳಿ, ಮತದಾರರಿಗೆ ಹಂಚಲು ಅಪಾರ ಪ್ರಮಾಣದ ಶರ್ಟ್ಸ್‌,ಪಂಚೆ, ಸೀರೆಗಳ ಜಪ್ತಿ 

Views: 135

ಕನ್ನಡ ಕರಾವಳಿ ಸುದ್ದಿ: ಚನ್ನಪಟ್ಟಣ ಉಪ ಚುನಾವಣೆ ಜಿದ್ದಾಜಿದ್ದಿ ಹೋರಾಟದ ಕಣ  ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಿಗೆ ಇದು ಪ್ರತಿಷ್ಠೆಯ ಕದನವಾಗಿದೆ.  ನೇರ ನೇರ ಹಣಾಹಣಿಯಲ್ಲಿ ಉಪ ಕದನವನ್ನು ಗೆಲ್ಲಲೇ ಬೇಕೆಂದು ಪಣತೊಟ್ಟಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಹಳ್ಳಿ ಹಳ್ಳಿಗಳಿಗೂ ತೆರಳಿ, ಅಬ್ಬರದ ಪ್ರಚಾರದ ಮೂಲಕ ಮತಬೇಟೆಯಾಡಿದ್ದಾರೆ. ಇದರ ಜೊತೆಗೆ ವಿವಿಧ ಆಮಿಷಗಳ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿರುವ ಅನುಮಾನ ಮೂಡಿದೆ.

ರಾಮನಗರ ಜಿಲ್ಲೆಯ ಭೀಮೇನಹಳ್ಳಿ ಬಳಿಯ ಗೋಡೌನ್ವೊಂದರಲ್ಲಿ ಅಪಾರ ಪ್ರಮಾಣದ ಸೀರೆ, ಪಂಚೆ, ಶರ್ಟ್ಗಳು ಪತ್ತೆ ಆಗಿವೆ. ಖಚಿತ ಮಾಹಿತಿ ಮೇರೆಗೆ ಎಸಿ ಬಿನೋಯ್ ನೇತೃತ್ವದಲ್ಲಿ ಸ್ಟೋರಿ ಫ್ಯಾಷನ್ ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸಂಗ್ರಹಿಸಿಟ್ಟಿದ್ದ ಸೀರೆ, ಪಂಚೆಗಳ ಬಂಡಲ್ ಗಳನ್ನು ಜಪ್ತಿ ಮಾಡಲಾಗಿದೆ.

ಚನ್ನಪಟ್ಟಣ ಉಪ ಚುನಾವಣೆ ವೇಳೆಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೀರೆ, ಪಂಚೆಗಳು ಸಿಕ್ಕಿರೋದು, ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಶಂಕೆ ವ್ಯಕ್ತವಾಗಿದೆ. ಆದ್ರೆ, ಬಂಡಲ್, ಬಾಕ್ಸ್ ಮೇಲೆ ಯಾವುದೇ ಪಕ್ಷದ ಚಿಹ್ನೆಯೂ ಇಲ್ಲ.

ಸ್ಟೋರಿ ಫ್ಯಾಷನ್ ಕಂಪನಿಯ ಗೋಡೌನ್ ಇದಾಗಿದ್ದು, ಸದ್ಯ ಪೊಲೀಸರು ಗೋಡೌನ್ ಮಾಲೀಕ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇಷ್ಟೊಂದು ಪ್ರಮಾಣದ ಸೀರೆ, ಪಂಚೆಗಳು ಯಾರಿಗೆ ಸೇರಿದ್ದು, ಯಾಕೆ ಸಂಗ್ರಹಿಸಲಾಗಿತ್ತು ಎಂದು ವಿಚಾರಣೆ ನಡೆಸಿದ್ದಾರೆ.

 

Related Articles

Back to top button
error: Content is protected !!