ಯುವಜನ

ಗುಟ್ಟಾಗಿ ಮದುವೆಯಾಗಿ..ಸಹ ಜೀವನ ನಡೆಸಿ..ಯುವತಿಯ ಹೆಣ ಉರುಳಿಸಿ..ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ

Views: 0

ಕನ್ನಡ ಕರಾವಳಿ ಸುದ್ದಿ: ಪ್ರಿಯಕರಯೊಬ್ಬ ಯುವತಿಯ ಕತ್ತು ಹಿಸುಕಿ,ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ತಿಗಳರಪಾಳ್ಯ ತುಳಸಿನಗರದಲ್ಲಿ ನಡೆದಿದೆ.

ಮಾಗಡಿ ತಮೀಪದ ಗೆಜ್ಜರಗುಪ್ಪೆ ಗ್ರಾಮದ ನಿವಾಸಿ ಭವಾನಿ (22) ಪ್ರಿಯಕರನಿಂದ ಕೊಲೆಯಾದ ಯುವತಿ. ಚಂದ್ರಶೇಖರ್ ಕೊಲೆ ಆರೋಪಿ.

ಮೊಬೈಲ್ ಶೋ ರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಭವಾನಿಗೆ, ಕೆಲಸದ ಸ್ಥಳದಲ್ಲೇ ಚಂದ್ರಶೇಖರ್‌ ಪರಿಚಯವಾಗಿತ್ತು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ವಿಚಾರ ತಿಳಿದ ಭವಾನಿಗೆ ಮನೆಯಲ್ಲಿ ಬೇರೆ ಹುಡುಗನೊಂದಿಗೆ ಮದುವೆ ಮಾಡಲು ಮುಂದಾಗಿದ್ದರು.

ಈ ವಿಚಾರ ತಿಳಿದ ಚಂದ್ರಶೇಖರ್, ಭವಾನಿ ವಾಸಿಸುತ್ತಿದ್ದ ರೂಮ್‌ಗೆ ಹೋಗಿದ್ದಾನೆ. ಆಕೆಯ ಕತ್ತುಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ವಿಷ ಸೇವಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇತ್ತ ಪದೇ ಪದೇ ಫೋನ್ ಮಾಡಿದರೂ ರಿಸೀವ್ ಮಾಡದೇ ಇದ್ದರಿಂದ ಅನುಮಾನಗೊಂಡಿ ಭವಾನಿ ಕುಟುಂಬಸ್ಥರು ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಮನೆ ಮಾಲೀಕರು ರೂಮ್ ಬಳಿ ಹೋಗಿ ನೋಡಿದಾಗ ಚಂದ್ರಶೇಖರ್ ನರಳಾಡುತ್ತಿದ್ದದ್ದು ಕಂಡುಬಂದಿದೆ. ಆತಂಕದಲ್ಲಿ ಬಾಗಿಲು ಒಡೆದು ನೋಡಿದಾಗ ಭವಾನಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಕಳೆದ1 ವರ್ಷದ ಹಿಂದೆ ಇಬ್ಬರು ಯಾರಿಗೂ ಗೊತ್ತಾಗದ ಹಾಗೇ ವಿವಾಹವೂ ಆಗಿ ಸಹ ಜೀವನ ಸಾಗಿಸುತ್ತಿದ್ದರು. ಇದರ ನಡುವೆ ತಾನು ಕೈಹಿಡಿದಿರುವ ಗಂಡನಿಗೆ ಈ ಮೊದಲೇ ಮದುವೆಯಾಗಿ 6 ವರ್ಷದ 1 ಮಗು ಸಹ ಇದೆ ಎನ್ನುವ ಆಘಾತಕಾರಿ ಸಂಗತಿ ಭವಾನಿ ಕಿವಿಗೆ ಬಿದ್ದಿತ್ತು. ಯಾವಾಗ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಕೈ ಹಿಡಿದವನಿಗೆ ಮತ್ತೊಂದು ಮದುವೆಯಾಗಿದೆ ಎನ್ನುವುದು ತಿಳಿಯಿತೂ ಎಲ್ಲರಿಗೂ ಗೊತ್ತಾಗುವ ರೀತಿಯಲ್ಲಿ ಮತ್ತೊಬ್ಬನ ಮದುವೆಯಾಗುತ್ತೇನೆ ಎನ್ನುವ ನಿರ್ಧಾರಕ್ಕೆ ಭವಾನಿ ಬಂದಿದ್ದಳು.

ವರನೊಬ್ಬನ ನೋಡಿದ್ದ ಭವಾನಿ ಪೋಷಕರು ಮುಂದಿನ ವಾರ ಎಂಗೇಜ್ಮೆಂಟ್ ಮಾಡುವುದಕ್ಕೆ ಸಿದ್ಧತೆ ನಡೆಸುತ್ತಿದ್ದರು. ಈ ವಿಚಾರ ತಿಳಿದ ಚಂದ್ರಶೇಖರ್ ತಾನೇ ಮನೆ ಮಾಡಿಕೊಟ್ಟು ಭವಾನಿಯನ್ನು ಇರಿಸಿದ್ದ ಬ್ಯಾಡರಹಳ್ಳಿಯ ತಿಗಳರಪಾಳ್ಯ ತುಳಿಸಿನಗರದಲ್ಲಿರುವ ಮನೆಗೆ ಬಂದು ಭವಾನಿ ಜತೆ ಜಗಳ ಮಾಡಿದ್ದಾನೆ. ಬಳಿಕ ನೀನಿಲ್ಲದೇ ನಾನ್ ಬದುಕುವುದಿಲ್ಲ. ಬದುಕಿದರೆ ನಾವಿಬ್ಬರು ಒಟ್ಟಿಗೆ ಬದುಕೋಣ ಇಲ್ಲ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದಿದ್ದಾನೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಭವಾನಿ ನಿರಾಕರಿಸಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ವೇಳೆ ಚಂದ್ರಶೇಖರ್ ಭವಾನಿಯನ್ನು ಮದುವೆಯಾಗಿರುವ ಫೋಟೋ ಇನ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ಫೋಟೋ ಭವಾನಿ ಕುಟುಂಬಸ್ಥರು ನೋಡಿ ಫೋನ್ ಮಾಡಿದ್ದಾರೆ. ವಿಚಾರ ಎಲ್ಲರಿಗೂ ಗೊತ್ತಾಯಿತು ಎಂದು ಭವಾನಿ, ಚಂದ್ರಶೇಖರ ಜತೆಗೆ ಗಲಾಟೆ ಮಾಡಿದ್ದಾಳೆ. ಈ ಜಗಳದಲ್ಲಿ ಚಂದ್ರಶೇಖರ್, ಭವಾನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೃತ ಭವಾನಿ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!