ಕುಂದಾಪುರ: ಸಂಗಮ್ ಜಂಕ್ಷನ್ ನಲ್ಲಿ ಮನೆಗೆ ನುಗ್ಗಿ ಕಳವು ಪ್ರಕರಣ, ಆರೋಪಿ ಅರೆಸ್ಟ್
Views: 194
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಕುಂದಾಪುರದ ಮನೆಯೊಂದರಲ್ಲಿ ಕಳ್ಳರು ನುಗ್ಗಿ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ವಿನಯ್ ಆಸ್ಪತ್ರೆಯ ಪಕ್ಕ ಮೋಟಾರು ಸೈಕಲ್ ಕಳವು ಮಾಡಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಕಂದಾಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಪೊಲೀಸರು ಉತ್ತರಕನ್ನಡ ಜಿಲ್ಲೆಯ ಇರುವ ಮಾಹಿತಿಯ ಮೇರೆಗೆ ಮುರಡೇಶ್ವರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕುಂದಾಪುರ ತಾಲೂಕು ಸಂಗಮ್ ಜಂಕ್ಷನ್ ಹತ್ತಿರ ವಿರುವ ಜೆ ಎಮ್ ಜೆ ವಿಲ್ಲಾ ಎಂಬ ಹೆಸರಿನ ಪಿರ್ಯಾದಿದಾರರ ಮನೆಯಲ್ಲಿ ಮನೆಯ ಎದುರಿನ ಬಾಗಿಲಿನ ಚೀಲಕವನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಕಪಾಟಿನ ಬೀಗ ತೆಗೆದು ಕಪಾಟಿನಲ್ಲಿಟ್ಟಿದ್ದ ರೂಪಾಯಿ 10000/- ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ದೂರು ದಾಖಲಾಗಿದೆ
ಈ ಪ್ರಕರಣದ ತನಿಖೆಯ ಸಂಬಂಧ ಹೆಚ್ ಡಿ ಕುಲಕರ್ಣಿ, ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಕುಂದಾಫುರ ಪೊಲೀಸ್ ಠಾಣಾ ನಿರೀಕ್ಷಕರಾದ ಜಯರಾಮ್ ಡಿ ಗೌಡ ರವರ ನಿರ್ದೇಶನದಂತೆ ಠಾಣಾ ಪಿ.ಎಸ್.ಐ ರವರಾದ ನಂಜಾನಾಯ್ಕ್ ಎನ್(ಕಾ&ಸು), ಪಿ.ಎಸ್.ಐ ಶ್ರೀಮತಿ ಪುಷ್ಪ (ತನಿಖೆ), ಹಾಗೂ ಸಿಬ್ಬಂದಿಗಳಾದ ಮೋಹನ ಹೆಚ್‌ಸಿ, ಸಂತೋಷ ಹೆಚ್‌ಸಿ, ಪ್ರೀನ್ಸ್, ಮಹಾಬಲ ಶೆಟ್ಟಿಗಾರ ಹೆಚ್‌ಸಿ, ಸಂತೋಷ ದೇವಾಡಿಗ ಪಿಸಿ, ಘನಶ್ಯಾಮ್ ಪಿಸಿ ರವರ ತಂಡದ ಕಾರ್ಯಚರಣೆಯಲ್ಲಿ, ಆರೋಪಿಯ ಪತ್ತೆಯ ಬಗ್ಗೆ ಆತನ ವಿಳಾಸವಾದ ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲ ಎಂಬಲ್ಲಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿದಲ್ಲಿ ಆತನು ಉತ್ತರಕನ್ನಡ ಜಿಲ್ಲೆಯ ಮುರಡೇಶ್ವರದಲ್ಲಿ ಇರುವ ಮಾಹಿತಿಯ ಮೇರೆಗೆ ಮುರಡೇಶ್ವರದಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿದ ಸಮಯ ಕುಂದಾಪುರದಲ್ಲಿ ಮನೆ ಹಾಗೂ ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾನೆ. ಇತನಿಂದ ಕಳುವು ಮಾಡಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.






