ಇತರೆ
ಆಗುಂಬೆ ಘಾಟಿ ತಿರುವಿನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ: ಟ್ರಾಫಿಕ್ ಜಾಮ್
Views: 25
ಕನ್ನಡ ಕರಾವಳಿ ಸುದ್ದಿ: ತೀರ್ಥಹಳ್ಳಿ ತಾಲೂಕು ಆಗುಂಬೆ ಘಾಟಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬಿದ್ದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವ ಘಟನೆ ಭಾನುವಾರ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಿಂದ ಯುವರಾಜ್ ಎಂಬುವರು ತಮ್ಮ ಕುಟುಂಬದ ಜೊತೆಗೆ ಮಂದಾರ್ತಿ ದೇವಾಲಯಕ್ಕೆ ಹೋಗುವಾಗ ಆಗುಂಬೆ ಘಾಟಿಯ 12ನೇ ತಿರುವಿನಲ್ಲಿ ಕಾರ್ ಮೇಲೆ ಮರ ಬಿದ್ದ ಪರಿಣಾಮ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಇದರಿಂದ ಕಾರಿನ ಬಾನೆಟ್ ಸಂಪೂರ್ಣ ಹಾನಿಯಾಗಿದೆ. ಆದರೆ ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನ ಮೇಲೆ ಮರ ಬೀಳುತ್ತಿದ್ದಂತೆ ಅದರಲ್ಲಿದ್ದ ಯುವರಾಜ್ ಹಾಗೂ ಅವರ ಕುಟಂಬದವರು ಗಾಬರಿಯಾಗಿದ್ದಾರೆ. ಕಾರಿನ ಮೇಲೆ ಮರ ಬಿದ್ದ ಪರಿಣಾಮ ಆಗುಂಬೆ ಘಾಟಿಯಲ್ಲಿ ಕೆಲಕಾಲ ಸಂಚಾರ್ ಬಂದ್ ಆಗಿತ್ತು. ಸ್ಥಳಕ್ಕೆ ಆಗುಂಬೆ ಪೊಲೀಸರು ಹಾಗೂ ಅರಣ್ಯ ಇಲಾಖೆಯವರು ಬಂದು ಮರವನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.






