ಶಿರೂರು ಸುಂಕದಗುಂಡಿ ಹೊಳೆಯಲ್ಲಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಮುಳುಗಿ ಸಾವು
Views: 95
ಕನ್ನಡ ಕರಾವಳಿ ಸುದ್ದಿ: ಪ್ರವಾಸಕ್ಕೆ ಬಂದಿರುವ ಹಾವೇರಿ ಮೂಲದ ವಿದ್ಯಾರ್ಥಿಯೊರ್ವ ಈಜಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಶಿರೂರು ಸಂಕದಗುಂಡಿ ಹೊಳೆಯಲ್ಲಿ ಸಂಭವಿಸಿದೆ.

ಆಯುಷ್ (16) ಮೃತಪಟ್ಟ ದುರ್ದೈವಿ. ಹಾವೇರಿ ಸಮೀಪದ ಕೃಷಿ ನಗರದ ಒಟ್ಟು 7 ಜನ ಮುರುಡೇಶ್ವರ,ಕನ್ಯಾಕುಮಾರಿ ಪ್ರವಾಸಕ್ಕೆ ಹೊರಟಿದ್ದರು ಮುರುಡೇಶ್ವರ ಪ್ರವಾಸ ಮುಗಿಸಿ ಶಿರೂರು ಸಂಕದಗುಂಡಿ ಹೊಳೆ ಬಳಿ ವಿಶ್ರಾಂತಿಗೆ ನಿಲ್ಲಿಸಿದ್ದರು ಈ ಸಂದರ್ಭದಲ್ಲಿ ಮನೆಯವರೆಲ್ಲಾ ಊಟದ ತಯಾರಿಯಲ್ಲಿರುವ ವೇಳೆ ಇಬ್ಬರು ವಿದ್ಯಾರ್ಥಿಗಳು ಪಕ್ಕದಲ್ಲಿರುವ ನದಿಗೆ ಸ್ನಾನಕ್ಕೆ ತೆರಳಿದ್ದರು.ಶಿರೂರು ಸಂಕದಗುಂಡಿ ಹೊಳೆಯ ಆಳ ಇರುವ ಜಾಗದಲ್ಲಿ ಈಜಲು ತೆರಳಿದ ಕಾರಣ ನೀರಿನ ಆಳ ತಿಳಿಯದೆ ಮುಳುಗಿದ್ದಾನೆ.ತಕ್ಷಣ ಇನ್ನೊಬ್ಬ ಸಹೋದರ ಮನೆಯವರಿಗೆ ವಿಷಯ ತಿಳಿಸಿದ್ದು ಬದುಕಿಸುವ ಪ್ರಯತ್ನ ಮಾಡಿದರು ಕೂಡ ವಿಫಲವಾಗಿದೆ.
ಮೃತ ಬಾಲಕನ ತಂದೆ ತಾಯಿ ಗುಜರಾತ್‌ನಲ್ಲಿ ಸಣ್ಣ ವ್ಯವಹಾರ ನಡೆಸುತ್ತಿದ್ದು ಅಲ್ಲಿಯೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದಾನೆ.ತಾಯಿ ಹಾಗೂ ಇನ್ನೋರ್ವ ಸಹೋದರ ಸೇರಿ ಒಟ್ಟು 7 ಜನ ಪ್ರವಾಸಕ್ಕೆ ಹೊರಟಿದ್ದರು.ನದಿಯಲ್ಲಿ ಆಳ ಇರುವ ಕಾರಣ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸುಮಾರು ಒಂದು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಶವವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.






