ಸಾಮಾಜಿಕ

ಗಂಡ ಒಳ್ಳೆಯವನೇ, ಮನೆಯವರು ಒಳ್ಳೆಯವರಲ್ಲ; ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ

Views: 251

ಕನ್ನಡ ಕರಾವಳಿ ಸುದ್ದಿ: ಪತಿಯ ಮನೆಯವರಿಂದ ಮಾನಸಿಕ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಮಾಲೂರು ತಾಲೂಕಿನ ಕಾಡದೇನಹಳ್ಳಿಯಲ್ಲಿ ನಡೆದಿದೆ.

ರಶ್ಮಿ(25) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ದಿನೇಶ್ ಹಾಗೂ ರಶ್ಮಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.

ರಶ್ಮಿ ಡೆತ್‌ನೋಟ್‌ನಲ್ಲಿ ʻರೀ ಸಾರಿ ನಿಮ್ಮ ಅಮ್ಮ, ದೊಡ್ಡಮ್ಮನ ಕಾಟ ತಡೆಯೋಕೆ ಆಗುತ್ತಿಲ್ಲ. ಮದುವೆಯಾಗಿ ಬಂದಾಗಿನಿಂದ ನೆಮ್ಮದಿಯೇ ಇಲ್ಲ. ನನ್ನಿಂದ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ನನ್ನ ಗಂಡ ಒಳ್ಳೆಯವನೇ, ಆದರೆ ಮನೆಯವರು ಒಳ್ಳೆಯವರಲ್ಲ. ಅದಕ್ಕೆ ನೀವು ಬರುವಷ್ಟರಲ್ಲೇ ಸಾಯುತ್ತಿದ್ದೇನೆ, ಬೈʼ ಎಂದು ಬರೆದಿದ್ದಾರೆ. ವರದಕ್ಷಿಣೆ ತಂದಿಲ್ಲ ಎಂದು ಹೊಡೆಯುತ್ತಾರೆ ಎಂದು ಬರೆದು ಪತಿ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕರಣದ ಆರೋಪಿಗಳಾದ ಪತಿ ದಿನೇಶ್ ಗೌಡ, ಮಾವ ಅಪ್ಪಾಜಿ ಗೌಡ, ಅತ್ತೆ ಸರೋಜಮ್ಮ, ದೊಡ್ಡತ್ತೆ ರತ್ನಮ್ಮರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!