ಇತರೆ
ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ಸಾವು
Views: 79
ಕನ್ನಡ ಕರಾವಳಿ ಸುದ್ದಿ: ಗಂಡನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಹೆಂಡತಿಯೂ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.
ಶಶಿಧರ್ ಪತ್ತಾರ (40), ಸರೋಜಾ (35) ಸಾವನ್ನಪ್ಪಿದ ದಂಪತಿ. ಶಶಿಧರ್‌ಗೆ ಲೋ ಬಿಪಿಯಾಗಿ ಆಸ್ಪತ್ರೆಗೆ ಸಾಗಿಸುವಾಗ ಹೃದಯಾಘಾತದಿಂದ ಮೃತಪಟ್ಟಿದ್ದರು.
ಪತಿ ಶಶಿಧರ್ ಸಾವಿನ ಸುದ್ದಿ ತಿಳಿದು ಪತ್ನಿ ಸರೋಜಾಗೆ ಹೃದಯಾಘಾತವಾಗಿದೆ. ಸಾವಿನ ಸುದ್ದಿ ಕೇಳಿ ಸರೋಜಾ ಮನೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.






