ಕರಾವಳಿ
ಕೋಟ: ಬೈಕ್ ಗೆ ಟೆಂಪೋ ಡಿಕ್ಕಿ,ಬೈಕ್ ಸವಾರರಿಬ್ಬರು ಗಂಭೀರ

Views: 0
ಕೋಟ:ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಪೇಟೆಯ ಸರ್ಕಲ್ ನಲ್ಲಿ ಬೈಕ್ ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.
ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳೀಯ ಪಡುಮುಂಡು ಸಾಯಿಬ್ರಕಟ್ಟೆಯ ಸತೀಶ್ ಎಸ್ ಹಾಗೂ ಇನ್ನೊರ್ವ ಸಹಸವಾರ ಎಂದು ತಿಳಿಯಲಾಗಿದೆ.
ಬೆಂಗಳೂರುನಿಂದ ಪ್ರವಾಸಕ್ಕೆ ಹೊರಟ್ಟಿದ್ದ ಟೆಂಪೋ ಟ್ರಾವೆಲರ್ ವಾಹನವು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುರುಡೇಶ್ವರದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದು ಅದೇ ಮಾರ್ಗವಾಗಿ ಕುಂದಾಪುರ ದಿಂದ ಕೋಟ ಕಡೆಗೆ ಬರುತ್ತಿದ್ದ ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿರುತ್ತಾರೆ.
ಗಂಭೀರ ಗಾಯಗೊಂಡ ಬೈಕ್ ಸವಾರರನ್ನು ಕೋಟ ಜೀವನ ಮಿತ್ರ ನಾಗರಾಜ್ ಪುತ್ರನ್ ಹಾಗೂ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿರುತ್ತಾರೆ.
ಕೋಟ ಠಾಣೆಯ ಎಎಸ್ಐ ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.