ಆರೋಗ್ಯ

ಕೋಟೇಶ್ವರ: ಶಿವಪುರ ಕ್ಲಿನಿಕ್ ಹೆಸರಾಂತ ವೈದ್ಯ ಎಸ್ ಪಿ ಆಚಾರ್ಯ ಇನ್ನಿಲ್ಲ 

Views: 101

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಶಿವಪುರ ಕ್ಲಿನಿಕ್ ವೈದ್ಯ ಎಸ್ ಪಿ ಆಚಾರ್ಯ(88) ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 27ರಂದು ಕೋಟೇಶ್ವರ ಕೋಡಿ ಬೀಚ್ ಮಾರ್ಗದಲ್ಲಿರುವ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ಪತ್ನಿ ಡಾ.ಮೋಹಿನಿ ಆಚಾರ್ಯ 2025 ರಲ್ಲಿ ನಿಧನರಾಗಿದ್ದು, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಎಸ್ ಪಿ ಆಚಾರ್ಯ ಅವರು ಕೋಟೇಶ್ವರದಲ್ಲಿ ಹೆಸರಾಂತ ವೈದ್ಯರಾಗಿದ್ದು, ಅಂದಿನ ಕಾಲದಲ್ಲಿ ಸರಿಯಾದ ರಸ್ತೆ, ವಾಹನ ಸೌಲಭ್ಯ ಇಲ್ಲದೆ ಇರುವ ಕಾಲದಲ್ಲಿ ಇಲ್ಲಿನ ಹತ್ತಾರು ಗ್ರಾಮಗಳ ಮನೆ ಮನೆಗಳಿಗೆ ತಾವೇ ತೆರಳಿ ಔಷಧಿ ನೀಡಿ ಅದೇಷ್ಟೋ ಜೀವವನ್ನು ಉಳಿಸಿದ್ದಾರೆ. ಅಲ್ಲದೆ ಮನೆಯಲ್ಲಿಯೇ ಹೆರಿಗೆಯನ್ನು ಮಾಡಿಸುತ್ತಿದ್ದರು. ರೋಗಿಗಳಿಗೆ ಬೇಕಾಗಿರುವ ಎಲ್ಲಾ ಔಷಧಗಳನ್ನು ತಮ್ಮ ಮನೆಯಲ್ಲಿಯೇ ತಯಾರಿಸುತ್ತಿದ್ದರು. ಇವರ ಅನುಪಮ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದ್ದಾರೆ.

ಎಸ್ ಪಿ ಆಚಾರ್ಯ ನಿಧನದಿಂದ ಅವರ ಮಾನವೀಯ, ಪ್ರೀತಿಯ ಸೇವೆ ಹಾಗೂ ಆಪತ್ಕಾಲದ ವೈದ್ಯರ ಅಗಲಿಕೆಯ ವಿಷಯ ಕೇಳಿ ಜನರು ಕಂಬನಿ ಮಿಡಿದಿದ್ದಾರೆ.

Related Articles

Back to top button
error: Content is protected !!