ಜನಮನ
ಕೋಟೇಶ್ವರ ದ್ರಾವಿಡ ಬ್ರಾಹ್ಮಣ ಪರಿಷತ್ -79ನೇ ಸ್ವಾತಂತ್ರ್ಯೋತ್ಸವ ಆಚರಣೆ

Views: 38
ಕನ್ನಡ ಕರಾವಳಿ ಸುದ್ದಿ:ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್, ಕೋಟೇಶ್ವರ ವಲಯದಿಂದ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬೀಜಾಡಿಯ ಬೆಳ್ಳನಕೆರೆ ಧ್ವಜ ಕಟ್ಟೆಯಲ್ಲಿ ಆಚರಿಸಲಾಯಿತು.
ವಲಯದ ಹಿರಿಯ ಸದಸ್ಯರಾದ ವೆಂಕಟೇಶ ಅರಸ್ ಧ್ವಜಾರೋಹಣ ನೆರವೇರಿಸಿ, ನಮ್ಮ ಹಿರಿಯರ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ ಬಹು ಅಮೂಲ್ಯವಾದುದು. ಅದನ್ನು ನಾವು ಸಂರಕ್ಷಿಸಿಕೊಳ್ಳುವುದರೊಂದಿಗೆ ನಾವೂ ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕೋಟೇಶ್ವರ ವಲಯ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಾದಿರಾಜ ಹೆಬ್ಬಾರ್, ಗೌರವಾಧ್ಯಕ್ಷ ಗಣಪಯ್ಯ ಚಡಗ,ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್, ಬಿ. ಲಕ್ಷ್ಮೀನಾರಾಯಣ ಉಪಾಧ್ಯಾಯ, ಗುಲಾಬಿ ಅಮ್ಮ, ಅಹಲ್ಯ ಅರಸ್ ಅಮೃತ ಅರಸ್, ಕುಮಾರಸ್ವಾಮಿ, ವಿನಯ್ ಹೆಬ್ಬಾರ್ ಹಾಗೂ ವಲಯದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.