ಕರಾವಳಿ
ಕೋಟೇಶ್ವರ:ಊಟ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವು

Views: 269
ಕುಂದಾಪುರ: ಕೋಟೇಶ್ವರದಲ್ಲಿ ಹೋಟೆಲ್ ಗೆ ಊಟಕ್ಕೆ ತೆರಳಿದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಹೃದಯಾಘಾತದಿಂದ ಸಾವನಪ್ಪಿದ ಘಟನೆ ನಡೆದಿದೆ.
ವಡೇರ ಹೋಬಳಿ ಗ್ರಾಮದ ನಿವಾಸಿ ಶಿವಾನಂದ (42) ಅವರು ಕೋಟೇಶ್ವರದ ಕಾಗೇರಿ ಎಂಬಲ್ಲಿ ಕೂಲಿ ಕೆಲಸಕ್ಕೊಂದು ಹೋಗಿದ್ದು, ಮಧ್ಯಾಹ್ನ ಕೋಟೇಶ್ವರದ ಹೋಟೆಲ್ ನಲ್ಲಿ ಊಟ ಮಾಡುತ್ತಿರುವಾಗಲೇ ತೀವ್ರ ಸ್ವರೂಪದ ಎದೆ ನೋವು ಕಾಣಿಸಿಕೊಂಡು ಅಲ್ಲಿಯೇ ಕುಸಿದಿದ್ದಾರೆ. ಕೂಡಲೇ ಅಲ್ಲಿಂದ ಶಿವಾನಂದ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮೃತರ ಸಹೋದರ ಉದಯ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.