ಕರಾವಳಿ

ಕೋಟ:ಆಟವಾಡುತ್ತಿದ್ದ ವೇಳೆ ಮೈಮೇಲೆ ಗೇಟ್ ಬಿದ್ದು ಬಾಲಕ ಸಾವು 

Views: 0

ಕೋಟ:ಆಟವಾಡುತ್ತಿದ್ದ ವೇಳೆ ಗೆಸ್ಟ್ ಹೌಸ್ ನ ಗೇಟ್ ಮೈಮೇಲೆ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ಕೋಟ ತಟ್ಟು ಪಡುಕೆರೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಇಲ್ಲಿನ ನಿವಾಸಿ ಸುದೀರ್ ಮೊಗವೀರ ಅವರ ಏಕೈಕ ಪುತ್ರ ಸುಶಾಂತ್ 3 ಮೃತಪಟ್ಟ ಬಾಲಕ

ಮನೆಯ ಸಮೀಪದಲ್ಲಿರುವ ಗೆಸ್ಟ್ ಹೌಸ್ ನಲ್ಲಿ ಈ ಬಾಲಕ  ಪಕ್ಕದ ಮನೆಯ ಹುಡುಗರ ಜೊತೆ ಆಟವಾಡುತ್ತಿದ್ದ ಮೂರು ವರ್ಷದ ಸುಶಾಂತ್ ಎನ್ನುವ ಬಾಲಕನ ಮೇಲೆ ಆಕಸ್ಮಿಕವಾಗಿ ಸ್ಲೈಡಿಂಗ್ ಗೇಟ್ ಜಾರಿ ಮೈಮೇಲೆ ಬಿದ್ದು ತಲೆಗೆ ಗಂಭೀರ ಗಾಯವಾಗಿರುತ್ತದೆ. ತಕ್ಷಣ ಕೋಟ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಷ್ಟರಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.

ರೆಸಾರ್ಟ್ ಮಾಲಿಕ ಕಬ್ಬಿಣದ ಗೇಟನ್ನು ಸರಿಯಾಗಿ ಜೋಡಣೆ ಮಾಡದ ಕಾರಣ ಅವರ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿಯಿಂದ ಈ ದುರ್ಘಟನೆ ನಡೆದಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಕೋಟ ಆರಕ್ಷಕ ಠಾಣೆ ಎಸ್ಐ ಸುಧಾ ಪ್ರಭು ಹಾಗೂ ಎಎಸ್ಐ ರವಿಕುಮಾರ್, ಮತ್ತು ಗೋಪಾಲ್ ಪೂಜಾರಿ ಸಿಬ್ಬಂದಿ ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲಕ್ಕೆ ಸಾಗಿಸಲಾಗಿದೆ.

Related Articles

Back to top button