ಇತರೆ

ಕೊಳವೆ ಬಾವಿಗೆ ಬಿದ್ದ ಬಾಲಕಿ : 50 ಗಂಟೆಗಳ ಕಾರ್ಯಾಚರಣೆ | ಬಾಲಕಿ ಶವವಾಗಿ ಪತ್ತೆ 

Views: 15

ಮಧ್ಯ ಪ್ರದೇಶದ ಸೆಹೋಶ್ ನಲ್ಲಿ 300 ಅಡಿ ಬೋರ್ ವೆಲ್ ಗೆ ಬಿದ್ದಿದ್ದ ಎರಡೂವರೆ ವಷ೯ದ ಬಾಲಕಿಯ ರಕ್ಷಣೆಗೆ 50 ಗಂಟೆಗಳ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡಗಳು ಗುರುವಾರ ಸಂಜೆ ಹೊತ್ತಿಗೆ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

ಮಂಗಳವಾರ ಮಧ್ಯಾಹ್ನ 300 ಅಡಿ ಬೋರ್ ವೆಲ್ ಗೆ ಬಿದ್ದ ಬಾಲಕಿಯ ರಕ್ಷಣೆಗೆ ಜಾಗಕ್ಕೆ ತಲಪುವಲ್ಲಿ ಯಶಸ್ವಿಯಾಗಿದ್ದರು. ನಿರಂತರ ನಡೆದ ಕಾರ್ಯಾಚರಣೆ ಫಲಕಾರಿಯಾಗದೇ ಬಾಲಕಿ ಶವವನ್ನು ಮೇಲಕ್ಕೆ ಎತ್ತಲಾಗಿದೆ.

ಬಾಲಕಿ ಆರಂಭದಲ್ಲಿ 40 ಅಡಿಗಳಷ್ಟು ಸಿಲುಕಿದ್ದಾಳೆ ಎಂದು ರಕ್ಷಣಾ ಕಾರ್ಯಾಚರಣೆಗೆ ಇಳಿಸಲಾದ ಯಂತ್ರಗಳಿಂದ ಆದ ಕಂಪನದಿಂದ ಬಾಲಕಿ ಇನ್ನಷ್ಟು ಆಳಕ್ಕೆ ಸರಿದ್ದರಿಂದ ಕೃತಕ  ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು,ಆದರೂ  ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

Related Articles

Back to top button
error: Content is protected !!