ಸಾಂಸ್ಕೃತಿಕ
ಕೊಲ್ಲೂರು ಶ್ರೀಮೂಕಾಂಬಿಕೆ ಸನ್ನಿಧಿಯಲ್ಲಿ ಗಾನ ಸೇವೆ ಸಲ್ಲಿಸಿದ ಜನ್ಸಾಲೆ

Views: 0
ಬಡಗುತಿಟ್ಟಿನ ಹೆಸರಾಂತ ಭಾಗವತ ಗಾನಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರು ಮದ್ದಳೆ, ಚೆಂಡೆ ವಾದನದೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವರ ಸನ್ನಿಧಿಯಲ್ಲಿ ಗಾನ ಸೇವೆ ಸಲ್ಲಿಸಿದರು.
ದೇವಾಲಯದ ಮುಂಭಾಗದಲ್ಲಿ ಮೂಕಾಂಬಿಕೆಯ ಗಾನ ಸ್ತುತಿಯೊಂದಿಗೆ ಜನ್ಸಾಲೆ ಇಂಪಾದ ಹಾಡಿಗೆ ಸೇರಿದ ಭಕ್ತರು ಭಕ್ತಿ ಭಾವದಿಂದ ತಲೆದೂಗಿಸಿದ್ದಾರೆ.
ಬಡಗುತಿಟ್ಟಿನ ಪೆರ್ಡೂರು ಡೇರೆ ಮೇಳದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರು ಯಕ್ಷಗಾನ ತಿರುಗಾಟದ ಆರಂಭಕ್ಕೂ ಮೊದಲು ಬೇರೆ ಬೇರೆ ದೇವಾಲಯಕ್ಕೆ ತೆರಳಿ ಗಾನ ಸೇವೆಯನ್ನು ಈ ಹಿಂದೆಯೂ ಸಲ್ಲಿಸಿದ್ದಾರೆ.






