ಸಾಂಸ್ಕೃತಿಕ

ಕೊರ್ಗಿ- ಕಾಳಾವರ ಲಯನ್ಸ್ ಕ್ಲಬ್: ಇಂಜಿನಿಯರ್ ದಿನಾಚರಣೆ, ಸನ್ಮಾನ

Views: 1

ಶ್ರೇಷ್ಠ ಇಂಜಿನಿಯರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಾಧನೆಗಳನ್ನು ಗುರುತಿಸಲು ಮತ್ತು ಗೌರವಿಸಲು ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ರಾಷ್ಟ್ರೀಯ ಇಂಜಿನಿಯರ್ ದಿನವನ್ನು ಆಚರಿಸುತ್ತದೆ. ಅಂದಿನಿಂದ  ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಿದ ಮತ್ತು ಈಗಲೂ  ಎಂಜಿನಿಯರ್‌ಗಳನ್ನು ಗೌರವಿಸಲು ಮತ್ತು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಆ ನಿಟ್ಟಿನಲ್ಲಿ ಕೊರ್ಗಿ- ಕಾಳಾವರ  ಇಂಜಿನಿಯರ್ ದಿನಾಚರಣೆ  ಪ್ರಯುಕ್ತ   ಸೆ.15 ರಂದು  ಶ್ರೀ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು  ಶ್ರೀಮತಿ ವೀಣಾ ಎಲ್ ಶೆಟ್ಟಿ ದಂಪತಿಗಳ ಪುತ್ರ ಇಂಜಿನಿಯರ್ ಗಣೇಶ್ ಶೆಟ್ಟಿ ಮೊಳಹಳ್ಳಿ  ಅವರ  ಸ್ವಗೃಹಕ್ಕೆ ತೆರಳಿ  ಸನ್ಮಾನಿಸಲಾಯಿತು.

ಕೊರ್ಗಿ-ಕಾಳಾವರ  ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಕಾರ್ಯದರ್ಶಿ ಸುಧೀರ್ ಶೆಟ್ಟಿ ಮಲ್ಯಾಡಿ, ಖಜಾಂಚಿ ಸುಖಾನಂದ ಹೆಗ್ಡೆ  ಉಪಸ್ಥಿತರಿದ್ದರು.

ಲಯನ್ಸ್ ಸದಸ್ಯರಾದ ದಿನಕರ್ ಹೆಗ್ಡೆ ಕಕ್ಕೇರಿ ,ನಾಗರಾಜ್ ಹೊಸಮಠ ,ಅಶೋಕ್ ಹೂವಿನಕೆರೆ, ಭಾಸ್ಕರ್ ಶೆಟ್ಟಿ, ಚತುರ್ ಶೆಟ್ಟಿ, ಗೌರೀಶ್ ಹೆಗ್ಡೆ,ರವೀಂದ್ರ ,ಸಂಕೇತ್ ಹೊಸಮಠ, ಶರತ್ ಶೆಟ್ಟಿ, ವೈಭವ್ ಶೆಟ್ಟಿ, ಅರುಣ, ಪುನೀತ್ ಶೆಟ್ಟಿ, ಸುಧಾಕರ್ ಶೆಟ್ಟಿ, ಸುಜಿತ್ ಶೆಟ್ಟಿ,, ಸುನಿಲ್ ಶೆಟ್ಟಿ, ರಾಕೇಶ್ ಕುಮಾರ್ ಶೆಟ್ಟಿ, ಉಮಾನಾಥ್ ಹೆಗ್ಡೆ,   ಹರಿಪ್ರಸಾದ್ ಶೆಟ್ಟಿ  ಹಾಜರಿದ್ದರು.

Related Articles

Back to top button
error: Content is protected !!