ಕರಾವಳಿ

ಕೊಡಗಿನ ಕಾಫಿ ತೋಟದ ಪುರಾತನ ಶಿವ ದೇವಸ್ಥಾನದ ಆವರಣದಲ್ಲಿ ನಿಧಿ ಪತ್ತೆ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆನಂದಪುರ ಗ್ರಾಮದಲ್ಲಿರುವ ಪುರಾತನ ಈಶ್ವರ ದೇವಸ್ಥಾನ ಆವರಣದಲ್ಲಿ ನಿಧಿ ಪತ್ತೆಯಾಗಿದೆ. ದೇವಸ್ಥಾನ ಆವರಣದಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಮಣ್ಣಿನ ಮಡಕೆಯಲ್ಲಿ ಚಿನ್ನದ ನಗನಾಣ್ಯ ಪತ್ತೆಯಾಗಿವೆ.

Views: 1

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆನಂದಪುರ ಗ್ರಾಮದಲ್ಲಿರುವ ಪುರಾತನ ಈಶ್ವರ ದೇವಸ್ಥಾನ ಆವರಣದಲ್ಲಿ ನಿಧಿ ಪತ್ತೆಯಾಗಿದೆ ದೇವಸ್ಥಾನ ಆವರಣದಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಮಣ್ಣಿನ ಮಡಕೆಯಲ್ಲಿ ಚಿನ್ನದ ನಗನಾಣ್ಯ ಪತ್ತೆಯಾಗಿವೆ.

ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿತೋಟದಲ್ಲಿ‌ ಪುರಾತನ ಈಶ್ವರ ದೇವಸ್ಥಾನ ಇದೆ. ಈ ದೇವಸ್ಥಾನದ ಆವರಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಭೂಮಿಯಡಿಯಲ್ಲಿ ಮಣ್ಣಿ ಮಡಕೆ ಪತ್ತೆಯಾಗಿದ್ದು, ಅದರಲ್ಲಿ ಚಿನ್ನದ ಆಭರಣಗಳು ಪತ್ತೆಯಾಗಿವೆ.

ಕಾಫಿ ಎಸ್ಟೇಟ್‌ ಒಳಗೆ ಈಶ್ವರ ದೇವಸ್ಥಾನವಿದ್ದು, ಕಾಂಪೌಂಡ್‌ ಗೋಡೆ ನಿರ್ಮಾಣಕ್ಕೆ ಅಗೆಯುತ್ತಿದ್ದಾಗ ನಿಧಿ ಗೋಚರಿಸಿದೆ.ಬಂಗಾರವನ್ನು ಹೋಲುವ 1 ಕೆಜಿ 150 ಗ್ರಾಂ ತೂಕದ ಆಭರಣ ದೊರೆತಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಿಧಿಯನ್ನು ತಹಶೀಲ್ದಾರರಿಗೆ ಹಸ್ತಾಂತರಿಸಲಾಗಿದ್ದು, ನ್ಯಾಯಾಲಯದ ಅನುಮತಿ ಅನಂತರ ಪುರಾತತ್ವ ಇಲಾಖೆಗೆ ವರ್ಗಾಯಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ತಿಳಿಸಿದ್ದಾರೆ.

Related Articles

Back to top button