ರಾಜಕೀಯ

ಕುರ್ಚಿ ಕದನ :ಸಿದ್ದು VS ಡಿಕೆಶಿ ಪೋಸ್ಟರ್‌ ವಾರ್‌!.. ಸಂದೇಶವೇನು?

Views: 42

ಕನ್ನಡ ಕರಾವಳಿ ಸುದ್ದಿ: ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಸಾಮಾಜಿಕ ಜಾಲತಾಣದಲ್ಲಿ  ಪೋಸ್ಟರ್‌ ವಾರ್‌ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ಕೊಟ್ಟ ಮಾತಿನ ಬಗ್ಗೆ ಒಬ್ಬರಿಗೊಬ್ಬರು ಪರೋಕ್ಷವಾಗಿ ಟ್ವೀಟ್‌ (ಎಕ್ಸ್‌ನಲ್ಲಿ) ಪೋಸ್ಟ್‌ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಡಿಕೆ ಶಿವಕುಮಾರ್ ಅವರು ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿ ದೊಡ್ಡ ಶಕ್ತಿ ಎಂಬ ಅರ್ಥದಲ್ಲಿ “ವರ್ಡ್‌ ಪವರ್‌ ಇಸ್‌ ಎ ವರ್ಲ್ಡ್‌ ಪವರ್‌” ಎಂದು ಟ್ವೀಟ್‌ ಪೋಸ್ಟ್‌ ಮಾಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿಗೆ ನಡೆಸುಕೊಳ್ಳುತ್ತಿಲ್ಲ ಎಂದು ಪರೋಕ್ಷವಾಗಿ ಸಂದೇಶ ನೀಡಿದಂತಾಗಿದೆ.

ಅದಕ್ಕೆ ಉತ್ತರವಾಗಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿ, “ಒಂದು ಮಾತು ಜನರಿಗೆ ಜಗತ್ತನ್ನು ಉತ್ತಮಗೊಳಿಸದ ಹೊರತು ಅದು ಶಕ್ತಿಯಲ್ಲ. ಕರ್ನಾಟಕಕ್ಕೆ ನಮ್ಮ ಮಾತು ಕೇವಲ ಘೋಷಣೆಯಲ್ಲ, ಅದೇ ನಮಗೆ ಜಗತ್ತು ” ಎಂದು ಟ್ವೀಟ್‌ ಪೋಸ್ಟ್‌ ಮಾಡಿದ್ದಾರೆ. ಇದು ಡಿಕೆ ಶಿವಕುಮಾರ್ ಅವರು ಟ್ವೀಟ್‌ಗೆ ತಿರುಗೇಟು ಕೊಟ್ಟಂತಿದೆ.

” ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿ ದೊಡ್ಡ ಶಕ್ತಿ. ಯಾರೇ ಆಗಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ಜಡ್ಜ್ ಆಗಲಿ, ಅಧ್ಯಕ್ಷರಾಗಲಿ, ಯಾರೇ ಆಗಿರಲಿ. ನನ್ನನ್ನು ಸೇರಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ” ಎಂದು ಡಿಕೆ ಶಿವಕುಮಾರ್ ಅವರ ಅಧಿಕೃತ ಖಾತೆಯಿಂದ ಟ್ವೀಟ್‌ ಮಾಡಿದ್ದರು. ಆದರೆ, ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ” ನಾನು ಆ ರೀತಿ ಪೋಸ್ಟ್ ಮಾಡಿಲ್ಲ ” ಎಂದು ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯನವರ  ಟ್ವೀಟ್‌ನ ಏನಿದೆ?

” ಒಂದು ಮಾತು ಜಗತ್ತನ್ನು ಉತ್ತಮಗೊಳಿಸದ ಹೊರತು ಅದು ಶಕ್ತಿಯಲ್ಲ. ಶಕ್ತಿ ಯೋಜನೆಯು ನಮ್ಮ ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಬಸ್‌ ಪ್ರಯಾಣವನ್ನು ತಲುಪಿಸಿದೆ. ಸರ್ಕಾರವನ್ನು ರಚಿಸಿದ ಮೊದಲ ತಿಂಗಳಿನಿಂದಲೇ, ನಾವು ನಮ್ಮ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಪದಗಳಲ್ಲಿ ಅಲ್ಲ, ಕಾರ್ಯದಲ್ಲಿದೆ. ಶಕ್ತಿ – 600 ಕೋಟಿಗೂ ಹೆಚ್ಚು ಉಚಿತ ಪ್ರವಾಸಗಳು ಪೂರ್ಣವಾಗಿವೆ. ಗೃಹ ಲಕ್ಷ್ಮಿ ಯೋಜನೆಯಲ್ಲಿ 1.24 ಕೋಟಿ ಮಹಿಳಾ ನೇತೃತ್ವದ ಕುಟುಂಬಗಳಿಗೆ ಸಬಲೀಕರಣ, ಯುವ ನಿಧಿ – 3 ಲಕ್ಷಕ್ಕೂ ಹೆಚ್ಚು ಯುವಕರಿಗೆ ಭದ್ರತೆ ಮತ್ತು ಭರವಸೆಯೊಂದಿಗೆ ಬೆಂಬಲ ನೀಡಲಾಗಿದೆ. ಅನ್ನ ಭಾಗ್ಯ 2.0 – 4.08 ಕೋಟಿ ನಾಗರಿಕರಿಗೆ ಆಹಾರ ಭದ್ರತೆ, ಗೃಹ ಜ್ಯೋತಿ – 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ ಎಂದು ಸಿಎಂ ಪ್ರಸ್ತಾಪ ಮಾಡಿದ್ದಾರೆ.

ನನ್ನ ಮೊದಲ ಅವಧಿಯಲ್ಲಿ (2013–18), 165 ಭರವಸೆಗಳಲ್ಲಿ 157 95% ಕ್ಕಿಂತ ಹೆಚ್ಚು ವಿತರಣೆಯೊಂದಿಗೆ ಈಡೇರಿವೆ. ಈ ಅವಧಿಯಲ್ಲಿ, 593 ಭರವಸೆಗಳಲ್ಲಿ 243+ ಭರವಸೆಗಳು ಈಗಾಗಲೇ ಪೂರ್ಣಗೊಂಡಿವೆ ಮತ್ತು ಉಳಿದಿರುವ ಪ್ರತಿಯೊಂದು ಭರವಸೆಯನ್ನು ಬದ್ಧತೆ, ವಿಶ್ವಾಸಾರ್ಹತೆ ಮತ್ತು ಕಾಳಜಿಯೊಂದಿಗೆ ಪೂರೈಸಲಾಗುತ್ತದೆ ಎಂದಿದ್ದಾರೆ.

ಕರ್ನಾಟಕದ ಜನರು ನೀಡಿದ ಜನಾದೇಶವು ಒಂದು ಕ್ಷಣವಲ್ಲ, ಆದರೆ, ಐದು ಪೂರ್ಣ ವರ್ಷಗಳ ಜವಾಬ್ದಾರಿಯಾಗಿದೆ. ನಾನು ಸೇರಿದಂತೆ ಕಾಂಗ್ರೆಸ್ ಪಕ್ಷವು ನಮ್ಮ ಜನರ ಪರವಾಗಿ ಸಹಾನುಭೂತಿ, ಸ್ಥಿರತೆ ಮತ್ತು ಧೈರ್ಯದಿಂದ ನಡೆದುಕೊಳ್ಳುತ್ತಿದೆ. ಕರ್ನಾಟಕಕ್ಕೆ ನಮ್ಮ ಮಾತು ಒಂದು ಘೋಷಣೆಯಲ್ಲ, ಅದೇ ನಮಗೆ ಜಗತ್ತು ಎಂದು ಸಿಎಂ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Related Articles

Back to top button
error: Content is protected !!