ಇತರೆ

ಕುಂದಾಪುರ: 10 ಕೆ.ಜಿ ಬೆಳ್ಳಿಯ ಗಟ್ಟಿ, 3 ಲಕ್ಷ ನಗದು ಬಸ್ಸಿನಲ್ಲಿ ಬರುವಾಗ ಕಳ್ಳತನ

Views: 409

ಕನ್ನಡ ಕರಾವಳಿ ಸುದ್ದಿ: ಹತ್ತು ಕೆ.ಜಿ ಬೆಳ್ಳಿಯ ಗಟ್ಟಿ, ಮೂರು‌ ಲಕ್ಷ ನಗದನ್ನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಳ್ಳರು ಎಗರಿಸಿದ್ದಾರೆ.

ಕುಂದಾಪುರದ ಎನ್‌ ಕೃಷ್ಣಮೂರ್ತಿ ಶೇಟ್‌ (54)ಹಾಗೂ ಇವರ ಪತ್ನಿ ರವರು ಬೆಂಗಳೂರಿನ ವರ್ಧಮಾನ ಜ್ಯುವೆಲ್ಲರಿಯಲ್ಲಿ 10KG ಇರುವ ಎರಡು ಪ್ಯಾಕೆಟ್ ಬೆಳ್ಳಿಯ ಗಟ್ಟಿಯನ್ನು ಖರೀದಿಸಿ ಮಾಡಿಕೊಂಡು ರಾತ್ರಿ ಬೆಂಗಳೂರಿನ ಮೇಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಕೆಎಸ್ಆರ್‌ಟಿಸಿ  ಓಲ್ವಾ ಬಸ್‌ ನಲ್ಲಿ ಕುಳಿತುಕೊಂಡು ಆ ಸಮಯ 10 KG ಬೆಳ್ಳಿಯ ಗಟ್ಟಿಯ ಒಂದು ಪ್ಯಾಕೇಟನ್ನು ಒಂದು ಚೀಲದಲ್ಲಿ ಹಾಕಿ ಕಾಲಿನ ಅಡಿ ಇಟ್ಟುಕೊಂಡಿದ್ದರು.

ಬಳಿಕ ಇನ್ನೊಂದು 10 KG ಬೆಳ್ಳಿಯ ಗಟ್ಟಿಯ ಒಂದು ಪ್ಯಾಕೇಟನ್ನು ಹಾಗೂ 3ಲಕ್ಷ ನಗದು ಹಣವನ್ನು ಒಂದು ಬ್ಯಾಗ್‌ ನಲ್ಲಿ ಹಾಕಿ ಕುಳಿತುಕೊಂಡು ಸೀಟ್‌ ನ ಮೇಲ್ಬಾಗದ ಲೆಗೇಜ್‌ ಕಂಪಾರ್ಟಮೆಂಟನಲ್ಲಿ ಇಟ್ಟಿದ್ದಾರೆ. ಬಳಿಕ  ಪತ್ನಿ ಸುಮಾರು ರಾತ್ರಿ 10:30 ಗಂಟೆಯ ಸಮಯಕ್ಕೆ ಬಸ್‌ ನ ಮುಂದುಗಡೆ ಖಾಲಿ ಇರುವ ಸೀಟ್‌ ನಲ್ಲಿ ಹೋಗಿ ಕುಳಿತುಕೊಂಡಿದ್ದು,ನ.10ರಂದು ಬೆಳಿಗ್ಗೆ ರಂದು ಬೆಳಿಗ್ಗೆ 7 ಗಂಟೆಯ ಸಮಯಕ್ಕೆ ಸೀಟ್‌ ನ ಮೇಲ್ಬಾಗದ ಲೆಗೇಜ್‌ ಕಂಪಾರ್ಟಮೆಂಟನಲ್ಲಿ ಇಟ್ಟಿದ್ದ ಬ್ಯಾಗನ್ನು ನೋಡಲಾಗಿ ಬ್ಯಾಗನ ಜಿಪ್‌ ತೆರೆದಿದ್ದು ಬಳಿಕ ಬ್ಯಾಗನ್ನು ನೋಡಲಾಗಿ 10 KG ಬೆಳ್ಳಿಯ ಗಟ್ಟಿ ಹಾಗೂ 3ಲಕ್ಷ ನಗದು ಹಣ ಇಲ್ಲದೇ ಇದ್ದು, ಯಾರೋ ಕಳ್ಳರು ಎಗರಿಸಿದ್ದಾರೆ. 10 KG ಬೆಳ್ಳಿಯ ಗಟ್ಟಿ ಅಂದಾಜು ಮೌಲ್ಯ 15,39655/- ರೂಪಾಯಿ ಹಾಗೂ 3 ಲಕ್ಷ ಹಣ ಒಟ್ಟು 18,39,655/- ರೂಪಾಯಿನ್ನು ಬೆಂಗಳೂರಿನಿಂದ ಕುಂದಾಪುರದ ಕುಂಭಾಶಿಯ ದಾರಿಯ ಮದ್ಯದಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button