ಕರಾವಳಿ
ಕುಂದಾಪುರ: ಸಿಗಡಿ ಮೀನು ಹೆಕ್ಕಲು ಹೋಗಿದ್ದ ಮಹಿಳೆ ಹೊಳೆಯಲ್ಲಿ ಮುಳುಗಿ ಸಾವು

Views: 170
ಕುಂದಾಪುರ: ಕೋಣಿಯ ಮಲ್ಲನಬೆಟ್ಟು ಹೊಳೆಗೆ ಸಿಗಡಿ ಮೀನು ಹೆಕ್ಕಲು ಹೋಗಿದ್ದ ಕೋಣಿಯ ವನಜಾ (53) ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಎ.14ರಂದು ಬೆಳಗ್ಗೆ ಸಂಭವಿಸಿದೆ.
ನೀರಲ್ಲಿ ಮುಳುಗಿ ಎದ್ದು ಅಸ್ವಸ್ಥಗೊಂಡ ಮಹಿಳೆಯನ್ನು ಸ್ಥಳೀಯರ ಸಹಕಾರದೊಂದಿಗೆ ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಮೃತ ಮಹಿಳೆ ಅವರ ಪತಿ ವಾಸು ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.