ಜನಮನ

ಕುಂದಾಪುರ ರೈಲು ಪ್ರಯಾಣಿಕರ ಒತ್ತಾಯ ಮೇರೆಗೆ ಇಂದಿನಿಂದ ಮೈಸೂರು- ಮುರುಡೇಶ್ವರ ರೈಲು ಸಂಚಾರ ಆರಂಭ

Views: 0

ಕುಂದಾಪುರ: ಮಂಗಳೂರಿನವರೆಗೆ ಮಾತ್ರ ಸಂಚರಿಸುತ್ತಿದ್ದ ಬೆಂಗಳೂರು ಮೈಸೂರು ರೈಲನ್ನು ಈಗ ಮುರುಡೇಶ್ವರದ ವರೆಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 16ರಿಂದ ಈ ರೈಲು ಸಂಚಾರ ಆರಂಭಗೊಳ್ಳಲಿದೆ.

ಬೆಂಗಳೂರಿನಿಂದ ಸೆಪ್ಟೆಂಬರ್ 16ರ ರಾತ್ರಿ ಹೊರಡಲಿದ್ದು ಮೈಸೂರು, ಸಪ್ಟಂಬರ್ 17ರಂದು ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರ ತಲುಪಲಿದೆ.ಈ ಹಿಂದೆ ಈ ರೈಲು ಮಂಗಳೂರು ವರೆಗೆ ಮಾತ್ರ ಸಂಚರಿಸುತ್ತಿದ್ದು,

ಕರಾವಳಿ ಅದರಲ್ಲೂ ಕುಂದಾಪುರ ಭಾಗದ ರೈಲು ಪ್ರಯಾಣಿಕರ ಒತ್ತಾಯ ಜನಪ್ರತಿನಿಧಿಗಳ ಪ್ರಯತ್ನಿಯಿಂದಾಗಿ ಈ ರೈಲು ಸಂಚಾರವನ್ನು ಮುರುಡೇಶ್ವರದವರೆಗೆ ವಿಸ್ತರಿಸಲಾಗಿದೆ. ಇದರಿಂದ ಮೈಸೂರು ಭಾಗದಿಂದ ಕರಾವಳಿಗೆ ಬರುವವರಿಗೆ ಕರಾವಳಿ ಭಾಗದಿಂದ ಮೈಸೂರು ಕಡೆಗೆ ತೆರಳುವವರಿಗೆ ಅನುಕೂಲವಾಗಲಿದೆ.

Related Articles

Back to top button
error: Content is protected !!