ಕರಾವಳಿ
ಕುಂದಾಪುರ:ಯಡಾಡಿ-ಮತ್ಯಾಡಿಯಲ್ಲಿ ಇಸ್ಪೀಟ್ ಜುಗಾರಿ ಆಟವಾಡುತ್ತಿದ್ದ ಮನೆಯೊಂದರ ಮೇಲೆ ಪೊಲೀಸ್ ದಾಳಿ:10 ಜನರ ಬಂಧನ

Views: 370
ಕುಂದಾಪುರ : ಹುಣ್ಸೆಮಕ್ಕಿ ಸಮೀಪ ಯಡಾಡಿ- ಮತ್ಯಾಡಿ ಗ್ರಾಮದ ಮತ್ಯಾಡಿಯ ವಾಸ ಮಾಡುತ್ತಿರುವ ಮನೆಯೊಂದರಲ್ಲಿ ಇಸ್ಟೀಟು ಜುಗಾರಿ ಆಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ, 10 ಜನರನ್ನು ಬಂಧಿಸಿದ್ದಾರೆ.
ಸುರೇಶ್, ಕೃಷ್ಣ, ಸಂತೋಷ್, ವಿಶ್ವನಾಥ, ಚಂದ್ರ, ರವಿ, ಸುಧಾಕರ, ಸತೀಶ, ಕೋಟಿ, ಆನಂದ ಅವರನ್ನು ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಗುರುನಾಥ ಬಿ.ಹಾದಿಮನೆ ಅವರ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಜುಗಾರಿ ಆಟಕ್ಕೆ ಬಳಸಿದ್ದ ಒಟ್ಟು 1,090 ರೂ. ಹಣ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.