ಕರಾವಳಿ

ಕುಂದಾಪುರ: ಬಸ್ಸಿನಲ್ಲಿ ಚೆಕ್ಕಿಂಗ್ ಕೆಲಸ ಮಾಡುತ್ತಿರುವ ಸುಧೀಂದ್ರ ನಾಪತ್ತೆ; ಈವರೆಗೂ ಸಿಗದ ಸುಳಿವು

Views: 230

ಕನ್ನಡ ಕರಾವಳಿ ಸುದ್ದಿ: ಖಾಸಗಿ ಬಸ್ಸಿನಲ್ಲಿ ಚೆಕಿಂಗ್ (ಸಿಸಿಟಿ) ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಧೀಂದ್ರ ಬಿಳಿಯ ಅವರು ಎಂದಿನಂತೆ ದಿನಾಂಕ 04.12.2024 ರಂದು ಬೆಳಿಗ್ಗೆ 6 ಗಂಟೆಗೆ ಕುಂದಾಪುರ ಕಸಬಾ ಗ್ರಾಮದ ವೆಸ್ಟ್ ಬ್ಲಾಕ್ ರಸ್ತೆಯಲ್ಲಿರುವ ಮನೆಯಿಂದ ಉಡುಪಿ ಸಿಸಿಟಿ ಕಚೇರಿಗೆ ಕೆಲಸಕ್ಕೆ ಹೋದವರು ಮನೆಗೆ ವಾಪಾಸು ಬಂದಿರುವುದಿಲ್ಲ, ದಿನಾಂಕ 5.12.2024 ರಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರು ಕೆಲಸ ಮಾಡುವ ಕಚೇರಿಗೆ ಹೋಗದೆ ಈವರೆಗೂ 25 ದಿನ ಕಳೆದರೂ ಇನ್ನೂ ಇವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಆ ದಿನ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆಂದು ತೆರಳಿದವರು ವಾಪಾಸು ಮನೆಗೆ ಬಂದಿರುವುದಿಲ್ಲ.ಮನೆಯಿಂದ ತೆರಳುವಾಗ ಕಪ್ಪು- ಬಿಳಿ ಬಣ್ಣದ ಬಟ್ಟೆ ಧರಿಸಿದ್ದು, ನೀಲಿ ಬಣ್ಣದ ಪ್ಯಾಂಟ್‌ ಧರಿಸಿದ್ದರು. ಬಲಗೈನಲ್ಲಿ ಆಂಜನೇಯ ದೇವರ ಟ್ಯಾಟೂ ಇದೆ.ತಾಯಿ ಮೀನಾಕ್ಷಿ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಾಹಿತಿ ಇದ್ದಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ವಿನಂತಿ, ಸಂಪರ್ಕ- 08254- 230338

Related Articles

Back to top button