ಕರಾವಳಿ
ಕುಂದಾಪುರ ನಗರ ಠಾಣೆಯ ಪಿಎಸ್ಐ ಯಾಗಿ ಶ್ರೀಮತಿ ಪುಷ್ಪ ಅಧಿಕಾರ ಸ್ವೀಕಾರ

Views: 1447
ಕುಂದಾಪುರ : ಶ್ರೀಮತಿ ಪುಷ್ಪ ಇವರು ಬ್ರಹ್ಮಾವರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡು ಕುಂದಾಪುರ ನಗರ ಠಾಣೆಯ ಪಿಎಸ್ಐ ಯಾಗಿ ದಿನಾಂಕ 13.07.2024 ರಂದು ಅಧಿಕಾರವನ್ನು ಸ್ವೀಕರಿಸಿರುತ್ತಾರೆ.
ಇವರು ಹಿಂದೆ ಕುಂದಾಪುರ ಸಂಚಾರ ಠಾಣೆ, ಕೋಟ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪೊಲೀಸ್ ಠಾಣೆ, ಕುಮಟಾ ಪೊಲೀಸ್ ಠಾಣೆ, ಮಂಗಳೂರು ನಗರ, ಮಂಗಳೂರು ನಗರದ ಪಾಂಡೇಶ್ವರ ಸಂಚಾರ ಠಾಣೆಗಳಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಅಲ್ಲದೇ ಈ ಹಿಂದೆ ಕಾರ್ಕಳ ನಗರ ಕೊಲ್ಲೂರು ಉಡುಪಿ ಮಹಿಳಾ ಠಾಣೆಗಳಲ್ಲಿ ಕೂಡ ಕರ್ತವ್ಯ ನಿರ್ವಹಿಸಿರುತ್ತಾರೆ.ಇವರು ಕುಂದಾಪುರ ತಾಲೂಕಿನ ಕಾಳಾವರದ ಅಸೋಡಿನ ನಿವಾಸಿಯಾಗಿರುತ್ತಾರೆ.