ಕರಾವಳಿ
ಕುಂದಾಪುರ ತಾಲೂಕು ಕಚೇರಿ ಆವರಣದಲ್ಲಿ ಜಾಗದ ವಿಷಯಕ್ಕೆ ಹೊಡೆದಾಟ!

Views: 356
ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕಚೇರಿ ಆವರಣದಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ಜಾಗದ ವಿಷಯದಲ್ಲಿ ಒಬ್ಬರ ಮೇಲೆ ಆರೋಪಿಸಿ, ಹೊಡೆದಾಟ ನಡೆದ ಘಟನೆ ಸಂಭವಿಸಿದೆ.
ತಹಸಿಲ್ದಾರ್ ಕಚೇರಿಯ ಪಕ್ಕದಲ್ಲಿ ಏಕಾಏಕಿ ಒಬ್ಬರಿಗೊಬ್ಬರಿಗೆ ಮಾತಿಗೆ ಮಾತು ಬೆಳೆದು ಹೊಡೆದಾಟ ಸಂಭವಿಸಿದೆ.
ತಹಶೀಲ್ದಾರ್ ಶೋಭಾ ಲಕ್ಷ್ಮೀ ಆಗಮಿಸಿ ಗಲಾಟೆ ಮಾಡಿಕೊಂಡವರನ್ನು ಕಚೇರಿಯ ಕಾಂಪೌಂಡಿನ ಹೊರಗಡೆ ಹೋಗುವಂತೆ ಆದೇಶಿಸಿದರು.ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವೀ ಯಾದರು.






